ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಸಂಭವಿಸಿದ ಸ್ಫೋಟದ ಭೀಕರ ಪರಿಣಾಮಗಳು ನಾಲ್ಕು ದಿನವಾದರೂ ಮುಗಿದಿಲ್ಲ. ಬಂದರಿನ ಉಗ್ರಾಣದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ನೂರಕ್ಕೂ ಅಧಿಕ ಜನ ಮೃತಪಟ್ಟರೆ, ಸಾವಿರಾರು ಜನ ಗಾಯಗೊಂಡಿದ್ದಾರೆ. ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಸ್ಫೋಟದ ಸಂದರ್ಭದಲ್ಲಿ ನಡೆದ ಭಯಾನಕ ದೃಶ್ಯಗಳ ವಿಡಿಯೋ ಕ್ಲಿಪ್ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸದ್ಯ ಇನ್ನೊಂದು ಕಣ್ಣೀರು ತರಿಸುವ ಹೃದಯ ವಿದ್ರಾವಕ ವಿಡಿಯೋವೊಂದು ಈಗ ಅಂತರ್ಜಾಲದಲ್ಲಿದೆ.
ಛಿದ್ರವಾದ ಮನೆಯೊಂದರಲ್ಲಿ ಕುಳಿತ ವೃದ್ಧೆ ಪಿಯಾನೊ ನುಡಿಸುತ್ತಿದ್ದಾಳೆ. ಸ್ಕಾಟಿಶ್ ಪ್ರಸಿದ್ಧ ಗೀತೆ “ಓಲ್ಡ್ ಲ್ಯಾನ್ ಸೈನ್” ಅನ್ನು ಆಕೆ ನುಡಿಸುತ್ತಿದ್ದಾಳೆ. ಮನೆಯಲ್ಲಿ ಕಿಟಕಿ, ಕಪಾಟಿನ ಗಾಜುಗಳು ಛಿದ್ರವಾಗಿವೆ. ಸೋಪಾದ ಹತ್ತಿ ಚೂರು ಚೂರಾಗಿ ಬಿದ್ದಿದೆ. ಕಿಟಕಿಗೆ ಹಾಕಿದ್ದ ಕರ್ಟನ್ ಕಿತ್ತು ಬಿದ್ದಿದೆ. ಪಿಯಾನೊದ ಕರುಣಾಜನಕ ಟ್ಯೂನ್ ಗೂ ಸದ್ಯ ಬೈರೂತ್ ನ ಲಕ್ಷಾಂತರ ಮನೆಗಳ ಪರಿಸ್ಥಿತಿಗೂ ಹೊಂದಿಕೆ ಆಗುವಂತಿದೆ.