alex Certify ಕೊರೊನಾ ನಿಯಂತ್ರಿಸಲು ಈ ಅಧಿಕಾರಿಗಳು ಮಾಡಿದ್ದಾರೆ ಹೊಸ ಪ್ಲಾನ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಂತ್ರಿಸಲು ಈ ಅಧಿಕಾರಿಗಳು ಮಾಡಿದ್ದಾರೆ ಹೊಸ ಪ್ಲಾನ್..​..!

ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್​ ಅಲೆ ಶುರುವಾಗಿದ್ದು ಸೋಂಕು ನಿಯಂತ್ರಣಕ್ಕೆ ಚೀನಾದ ಅಧಿಕಾರಿಗಳು ವಿವಿಧ ಮಹತ್ವದ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ, ಬೀಜಿಂಗ್​​ನ ಮಾರ್ಗಗಳನ್ನ ಬಂದ್​ ಮಾಡಲಾಗಿದ್ದು ಡಿಸೆಂಬರ್​ 10ರಿಂದ ಬೀಜಿಂಗ್​ಗೆ ವಿದೇಶದಿಂದ ಬಂದ ಪ್ರತಿಯೊಬ್ಬರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮಂಗಳವಾರ ಚೀನಾದಲ್ಲಿ 118 ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ. ಇದರಲ್ಲಿ ಬೀಜಿಂಗ್​​ನ ಸಮೀಪವೇ ಇರುವ ಹೆಬಿಯಲ್ಲಿ 19 ಹೊಸ ಕೊರೊನಾ ಪ್ರಕರಣಗಳು ಹಾಗೂ ಬೀಜಿಂಗ್​​ 7 ಕೊರೊನಾ ಕೇಸ್​ಗಳು ಸೇರಿವೆ.

ಹೈಲೋಂಗ್​​​ಜಿಯಾಂಗ್​​ನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಮ್​, ಕಾಫಿ ಶಾಪ್​ ಹಾಗೂ ಧಾರ್ಮಿಕ ಕೇಂದ್ರಗಳನ್ನ ಬಂದ್​ ಮಾಡಲಾಗಿದೆ.

ಕೊರೊನಾ ವಿರುದ್ಧ ಹೋರಾಡೋಕೆ ಚೀನಾ ಸ್ಥಳೀಯ ನೀತಿಯನ್ನ ಅನುಸರಿಸುತ್ತಿದೆ. ಹೆಬೀಯಲ್ಲಿ ಅಧಿಕಾರಿಗಳು ಒಂದು ಹಳ್ಳಿ, ಒಂದು ನೀತಿ ಎಂಬ ತತ್ವದ ಅಡಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈ ಮೂಲಕ ಕೊರೊನಾ ವೈರಸ್​ ನಿಯಂತ್ರಣ ಮಾಡಲು ಪ್ರಯತ್ನ ಪಡ್ತಿದ್ದಾರೆ.

ಕಿಕಿಹಾರ್​ ಎಂಬಲ್ಲಿ ಅಧಿಕಾರಿಗಳು ನಿವಾಸಿಗಳಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೊರೊನಾ ಸೋಂಕು ಕಂಡು ಬಂದ ಮನೆಗಳನ್ನ ಸೀಲ್​ಡೌನ್​ ಮಾಡಲಾಗ್ತಿದೆ. ಚೀನಾದಲ್ಲಿ ಒಟ್ಟು 88,557 ಕೊರೊನಾ ಕೇಸ್​ಗಳು ದಾಖಲಾಗಿದ್ದು ಈವರೆಗೆ ಒಟ್ಟು 4635 ಮಂದಿ ಸಾವನ್ನಪ್ಪಿದ್ದಾರೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...