ಕಂಚಿನ ಯುಗದ ಸಂದರ್ಭದಲ್ಲಿ ಕೇಂದ್ರ ಯೂರೋಪಿಯನ್ನರು ಕಂಚಿನ ಉಂಗುರಗಳು, ಕೊಡಲಿಯ ಬ್ಲೇಡ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ’ಯೂರೋ’ಗಳ ಮುಂಚಿನ ಅವತಾರದಲ್ಲಿ ಬಳಸುತ್ತಿದ್ದರು.
ನೆದರ್ಲೆಂಡ್ಸ್‌ನ ಲೆಯ್ಡೆನ್ ವಿವಿಯಲ್ಲಿ ಸಂಶೋಧಕರ ಅಧ್ಯಯನ ಪತ್ರದ ಸಾರವನ್ನು ಪ್ಲೋಸ್ ಒನ್ ವೃತ್ತ ಪತ್ರಿಕೆಯು ಪ್ರಕಟಿಸಿದೆ.
ಆಧುನಿಕ ಬದುಕಿನ ಅತ್ಯಂತ ನಿರ್ಣಾಯಕ ಆಯಾಮವಾದ ಹಣದ ಕರೆನ್ಸಿಯ ಮುಖ್ಯವಾಹಿನಿ ಅಳತೆ ಹಾಗೂ ಬಳಕೆಗಳು ಬಹಳ ಮುಖ್ಯವಾದಂಥವು.
ಪ್ರಾಚೀನ ಕಾಲದ ಜನರಿಗೆ ಅಳತೆ ಮಾಡುವ ನಿಖರವಾದ ಮಾದರಿಗಳು ಇಲ್ಲದೇ ಇದ್ದ ಕಾರಣ, ತಾಮ್ರದ ವಸ್ತುಗಳನ್ನು ಅವುಗಳ ಬದಲಿಗೆ ಬಳಸುತ್ತಿದ್ದರು ಎಂದು ಪ್ರಾಚ್ಯ ವಸ್ತು ತಜ್ಞರು ಅಭಿಪ್ರಾಯ ಪಡುತ್ತಾರೆ. ಜರ್ಮನಿ, ಆಸ್ಟ್ರಿಯಾ, ಝೆಕ್ ಗಣರಾಜ್ಯ ಸೇರಿದಂತೆ ಅನೇಕ ದೇಶಗಳಲ್ಲಿ ಪತ್ತೆ ಮಾಡಲಾದ ಪುರಾತನ ಕಾಲದ ಈ ಕಂಚಿನ ವಸ್ತುಗಳನ್ನೇ ಜನರು ಕರೆನ್ಸಿಯಾಗಿ ಬಳಸುತ್ತಿದ್ದರು ಎಂದು ನಂಬಲಾಗಿದೆ.
4000 ವರ್ಷಗಳ ಹಿಂದೆ ಕೇಂದ್ರ ಯೂರೋಪಿಯನ್ನರು ಕೃಷಿಕ ಸಮುದಾಯದಲ್ಲಿ ಬದುಕುತ್ತಿದ್ದ ದಿನಗಳಲ್ಲಿ ಬಳಸುತ್ತಿದ್ದ ಕಂಚಿನ ಉಪಕರಣಗಳು, ಶಸ್ತ್ರಗಳು ಹಾಗೂ ಕಟ್ಟಡ ನಿರ್ಮಾಣ ವಸ್ತುಗಳು ಇದರಲ್ಲಿ ಇವೆ.