ಶ್ವಾನಗಳಿಗೆಂದು ತಯಾರಿಸುವ ಪೇಯದ ರುಚಿ ನೋಡಲು, ’ಮುಖ್ಯ ರುಚಿ ಪರೀಕ್ಷಾಧಿಕಾರಿ’ ಹುದ್ದೆಗೆ ಸಮರ್ಥ ನಾಯಿಯೊಂದಕ್ಕೆ ಬಿಯರ್ ಕಂಪನಿಯೊಂದು ಹುಡುಕಾಡುತ್ತಿದೆ.
ಬಿಶ್ ಬಿಯರ್ ಎಂಬ ಸಂಸ್ಥೆ ನಾಯಿಗಳಿಗೆಂದೇ ಮಾಡಲಾದ ಬಿಯರ್ ಆದ ’ಡಾಗ್ ಬ್ರ‍್ಯೂ’ನ ಮೊದಲ ಬ್ಯಾಚ್ ಅಷ್ಟೂ ಪೇಯಗಳು ಬಿಡುಗಡೆಯಾದ 24 ಗಂಟೆಗಳ ಅವಧಿಯಲ್ಲಿ ಸೋಲ್ಡ್ ಔಟ್ ಆಗಿವೆ. ಇದೀಗ ನಾಯಿಗಳ ಬಿಯರ್ ಅನ್ನು ಇನ್ನಷ್ಟು ವೈವಿಧ್ಯಮಯವಾಗಿ ಮಾಡಿ, ಅವುಗಳ ರುಚಿಗೆ ಖಾತ್ರಿ ಕೊಡಲು ’ಶ್ವಾನಾಧಿಕಾರಿ’ಯೊಬ್ಬನ ಹುಡುಕಾಟದಲ್ಲಿದೆ ಈ ಕಂಪನಿ.
ಗೆಳೆಯನನ್ನು ವಿವಾಹವಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ
ಆಲ್ಕೋಹಾಲ್-ಮುಕ್ತವಾದ ಈ ಬಿಯರ್‌ಗಳ ರುಚಿ ನೋಡಿ ಹೇಳಲು ಸಂಬಳವಾಗಿ $20,000 (15 ಲಕ್ಷ ರೂ.ಗಳು), $800 ಮೌಲ್ಯದ ಸಾಕುಪ್ರಾಣಿ ವಿಮೆ ಹಾಗೂ ತಲಾ ನಾಲ್ಕು ಪ್ಯಾಕ್‌ಗಳ ಬುಶ್ ಡಾಗ್ ಬ್ರ‍್ಯೂ ಬಿಯರ್‌ನ 10 ಪೊಟ್ಟಣಗಳನ್ನು ಸಂಭಾವನೆಯಾಗಿ ಕೊಡಲಾಗುವುದು ಎಂದು ಘೋಷಿಸಲಾಗಿದೆ.
ರುಚಿ ಖಾತ್ರಿಪಡಿಸುವುದರ ಜೊತೆಗೆ, ಗುಣಮಟ್ಟ ನಿಯಂತ್ರಣ ಮತ್ತು ಈ ಬಿಯರ್‌ಗೆ ಪ್ರಚಾರ ರಾಯಭಾರಿಯಾಗಿಯೂ ಈ ’ಶ್ವಾನಾಧಿಕಾರಿ’ ಹೊಣೆ ನಿಭಾಯಿಸಬೇಕಿದೆ.