
ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬರುವ ಬಹುಮುಖ್ಯ ಘಟ್ಟ. ಈ ಘಟ್ಟವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ.
ಒಬ್ಬರು ಫೋಟೋಶೂಟ್ ಮಾಡಿಸಿಕೊಂಡರೆ, ಇನ್ನೊಬ್ಬರು ಯಾವ ಮಗುವೆಂದು ರಿವೀಲ್ ಮಾಡಲು ಪಾರ್ಟಿ ಆಯೋಜಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ, ಜೇನುನೊಣವನ್ನು ಹೊಟ್ಟೆಯ ಮೇಲೆ ಹಾಕಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಬೇಥಾನಿ ಕರುಲಾಕ್ ಬೇಕರ್ ಎನ್ನುವ ಮಹಿಳೆ ಈ ರೀತಿಯ ವಿಚಿತ್ರ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 37 ವರ್ಷದ ಮಹಿಳೆ, ತನ್ನ ಉಬ್ಬಿದ ಹೊಟ್ಟೆಯ ಮೇಲೆ ನೂರಾರು ಜೇನುನೊಣವನ್ನು ಬಿಟ್ಟುಕೊಂಡಿದ್ದಾರೆ. ಇದೀಗ ಈ ಫೋಟೋ ಭಾರಿ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್ ಬಂದಿದ್ದು, ನೆಟ್ಟಿಗರು ಆಕೆಯ ಧೈರ್ಯಕ್ಕೆ ಶಹಬಾಸ್‌ಗಿರಿ ನೀಡಿದ್ದಾರೆ.