ನವದೆಹಲಿ: ಕೋವಿಡ್ -19 ವಿಶ್ವವನ್ನು ಆವರಿಸಿ ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ಅದನ್ನು ತಡೆಯಲು ಲಸಿಕೆ ಸಿಕ್ಕಿಲ್ಲ. ಇನ್ನೇನು ಕಡಿಮೆಯಾಯ್ತು ಎನ್ನುವಾಗ ಮತ್ತೆ ಮತ್ತೆ ಆವರಿಸಿ ಭಯ ಹುಟ್ಟಿಸುತ್ತಿದೆ. ಕೋವಿಡ್ ತಡೆಗೆ ಮಾಸ್ಕ್ ಧಾರಣೆ ಅನಿವಾರ್ಯ. ಇದರಿಂದ ಹಲವು ದೇಶಗಳಲ್ಲಿ ಮಾಸ್ಕ್ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದನ್ನು ಕಡ್ಡಾಯ ಮಾಡಲಾಗಿದೆ. ಆದರೂ ಜನ ಆ ನಿಯಮಕ್ಕೆ ಬೆಲೆ ನೀಡುತ್ತಿಲ್ಲ.
ಜನರಿಗೆ ಮಾಸ್ಕ್ ಧಾರಣೆಯ ಪಾಠ ಹೇಳುವ ಫೋಟೋವೊಂದು ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸಾಕಿದ ಓತಿಕ್ಯಾತ ಮಾಸ್ಕ್ ಧರಿಸಿರುವ ಫೋಟೋವೊಂದು ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದೆ. ಮ್ಯೂಸಿಯಂನಂತೆ ಕಾಣುವ ಸ್ಥಳವೊಂದರಲ್ಲಿ ಬಾಲಕನೊಬ್ಬ ಮಾಸ್ಕ್ ಧರಿಸಿ ನಿಂತಿದ್ದಾನೆ. ಆತನ ಹೆಗಲ ಮೇಲೆ ಬಂಗಾರ ಬಣ್ಣದ ಓತಿಕ್ಯಾತದ ಬಾಯಿಗೆ ಪುಟ್ಟ ಮಾಸ್ಕ್ ಹಾಕಿರುವ ಫೋಟೋ ಇದೆ.
ಟ್ವೀಟನ್ನು 460 ಸಾವಿರ ಜನ ಇಷ್ಟಪಟ್ಟಿದ್ದಾರೆ. 60 ಸಾವಿರ ಜನ ರಿ ಟ್ವೀಟ್ ಮಾಡಿದ್ದಾರೆ. ಇದು ಜನರಿಗೆ ಮಾಸ್ಕ್ ಧಾರಣೆಯ ಪಾಠ ಹೇಳುತ್ತದೆ ಎಂದು ಹಲವು ಜನ ಕಮೆಂಟ್ ಮಾಡಿದ್ದಾರೆ.