
ಸೂಪರ್ ಮಾರ್ಕೆಟ್‌ಗೆ ಬಂದ ಸೀಗಲ್ ಒಂದು ಚಿಪ್ಸ್ ಬ್ಯಾಗ್ ಒಂದನ್ನು ಅಲ್ಲಿದ್ದ ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಹೋಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ನೋಡಿದ್ದೇವೆ.
ಇದೀಗ ಕರಡಿಯೊಂದು ಕ್ಯಾಲಿಫೋರ್ನಿಯಾದಲ್ಲಿ ಇಂಥದ್ದೇ ಮತ್ತೊಂದು ಘಟನೆಯಲ್ಲಿ, ಸೂಪರ್ ಮಾರ್ಕೆಟ್‌ಗೆ ಶಾಪಿಂಗ್‌ಗೆ ಬಂದಿದೆ. ಬಿಂದಾಸ್ ಆಗಿ ಸೂಪರ್ ಮಾರ್ಕೆಟ್‌ಗೆ ಬಂದ ಈ ಕರಡಿಯು ಕುರುಕಲು ತಿಂಡಿಯೊಂದರ ಪ್ಯಾಕನ್ನು ಬಾಯಿಯಲ್ಲಿ ಕಚ್ಚಿಕೊಂಡು ಏನೂ ಆಗೇ ಇಲ್ಲ ಎನ್ನುವಂತೆ ಅಲ್ಲಿಂದ ಹೊರಬಂದಿದೆ.
ಇದಾದ ಮೇಲೆ ತಡಮಾಡದ ಕರಡಿಯು ಹೊರಬರುತ್ತಲೇ ಪೊಟ್ಟಣವನ್ನು ತೆರೆದು ತಿನ್ನಲು ಆರಂಭಿಸಿದೆ. ಅಡಿನಾ ಬೈಡೂ ಹೆಸರಿನ ಗ್ರಾಹಕರೊಬ್ಬರು ಈ ಘಟನೆಯ ವಿಡಿಯೋವೊಂದನ್ನು ಮಾಡಿಕೊಂಡಿದ್ದಾರೆ.
https://www.facebook.com/FOXBaltimore/videos/1426435034220935