alex Certify ಆಳ ನೀರಿನಲ್ಲಿ ನಿರಂತರ ನಾಲ್ಕು ಗಂಟೆ ಇದ್ದ ತಿಮಿಂಗಿಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಳ ನೀರಿನಲ್ಲಿ ನಿರಂತರ ನಾಲ್ಕು ಗಂಟೆ ಇದ್ದ ತಿಮಿಂಗಿಲ

Beaked Whale Breaks Longest Dive Record by Staying Underwater for Nearly 4 Hours

ಸಾಗರಾಳದಲ್ಲಿ ಗಂಟೆಗಟ್ಟಲೆ ನೀರಿನೊಳಗಿರುವ ಮೂಲಕ ಕೊಕ್ಕು ತಿಮಿಂಗಿಲವೊಂದು ವಿಜ್ಞಾನಿಗಳು, ಪ್ರಾಣಿಶಾಸ್ತ್ರಜ್ಞರನ್ನು ನಿಬ್ಬೆರಗಾಗಿಸಿದೆ. ಅಮೆರಿಕಾದ ಉತ್ತರ ಕೆರೊಲಿನಾದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯವು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೊಕ್ಕು ತಿಮಿಂಗಿಲದ ಉಸಿರಾಟ ಸಾಮರ್ಥ್ಯ ಅರಿಯಲು ಈ ಅಧ್ಯಯನ ಸಹಕಾರಿಯಾಗಿದೆ.

ತಿಮಿಂಗಿಲಗಳಲ್ಲಿ ಅನೇಕ ಪ್ರಭೇದಗಳಿದ್ದು, ಇವುಗಳಿಗೆ ಡೈವ್ ಮಾಡುವುದು ಮತ್ತು ಈಜುವ ಕೌಶಲ್ಯ ಕರತಲಾಮಲಕ. ಮೀನಿನ ಜಾತಿಗೆ ಸೇರದ ಸಸ್ತನಿಗಳಾದ ತಿಮಿಂಗಿಲಗಳು ತಾಸುಗಟ್ಟಲೆ ನೀರಿನಲ್ಲಿ ಇರುವುದು ಅಚ್ಚರಿ ಮೂಡಿಸಿದೆ.

ಒಟ್ಟು 3600 ಡೈವ್ ಗಳನ್ನು ದಾಖಲು ಮಾಡಿದ್ದು, ಈ ಪೈಕಿ 222 ನಿಮಿಷಗಳ ಒಂದು ಡೈವ್ ಕೂಡ ದಾಖಲಾಗಿದೆ. ಇದು ಅತಿ ಹೆಚ್ಚು ದೀರ್ಘಾವಧಿಯ ಡೈವ್ ಆಗಿದ್ದು, ಇದೇ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಜಲಾಂತರ ಶಬ್ದಶೋಧಕದ ಕಾರ್ಯಾಚರಣೆ ನಡೆಯುತ್ತಿದ್ದರಿಂದ ಅಷ್ಟು ಹೊತ್ತೂ ತಿಮಿಂಗಿಲ ನೀರಿನಲ್ಲೇ ಇತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...