ನ್ಯೂಯಾರ್ಕ್: ವರ್ಣಭೇದದ ಬಗ್ಗೆ ಬಾರ್ಬಿ ಹಾಗೂ ಆಕೆಯ ಸ್ನೇಹಿತೆ ಆಫ್ರಿಕನ್ ಅಮೆರಿಕನ್ ಡಾಲ್ ನಿಕ್ಕಿ ಚರ್ಚಿಸಿದ ವಿಡಿಯೋ ವೈರಲ್ ಆಗಿದೆ. ಎನಿಮೇಟೆಡ್ ಈ ವಿಡಿಯೋ ಮೂಲತಃ ಯು ಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದ್ದು, ಅದರ ಒಂದು ಕ್ಲಿಪ್ ನ್ನು ಟ್ವಿಟರ್ ನಲ್ಲಿ ಫೆಂಟಿ ಟೆನ್ನಿಸ್ ಎಂಬಾಕೆ ಅಪ್ ಲೋಡ್ ಮಾಡಿದ್ದಾರೆ. ವಿಡಿಯೋವನ್ನು 3.3. ಲಕ್ಷ ಜನ ವೀಕ್ಷಿಸಿದ್ದಾರೆ.
ಬಿಳಿ ಜನ ತಮ್ಮ ಆ ಬಣ್ಣವನ್ನು ಗಳಿಸಿದ್ದಲ್ಲ. ಆದರೂ ಎಲ್ಲೆಡೆ ಅದರ ಪ್ರಯೋಜನ ಅವರಿಗೆ ಸಿಗುತ್ತದೆ. ಕಪ್ಪು ಜನರಿಗೆ ಕಪ್ಪು ಬಣ್ಣ ಬಯಸಿ ಬಂದಿದ್ದಲ್ಲ. ಆದರೂ ಅವರು ಆ ಬಣ್ಣದಿಂದ ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದು ಆಫ್ರಿಕನ್ ಅಮೆರಿಕನ್ ಡಾಲ್ ನಿಕ್ಕಿ ಹೇಳುತ್ತಾಳೆ.
ತಾನು ಹೈಸ್ಕೂಲ್ ಗೆ ಹೋಗುವಾಗ ಅಲ್ಲಿನ ಫ್ರೆಂಚ್ ಕ್ಲಬ್ ಗೆ ಆಯ್ಕೆಯಾಗಿದ್ದೆ. ಉತ್ತಮ ಅಂಕ ಪಡೆದವರಿಗೆ ಅಲ್ಲಿ ಸ್ಥಾನ ಸಿಗುತ್ತದೆ. ಆದರೆ, ಬಿಳಿ ವರ್ಣದ ಶಿಕ್ಷಕಿ ಒಬ್ಬರು ನನ್ನನ್ನು ಕಿಚಾಯಿಸಿದ್ದರು. ನೀನು ಕಷ್ಟ ಪಟ್ಟು ಓದಿ ಗೆದ್ದೆ ಎನ್ನುವ ಬದಲು ನೀನು ಅದೃಷ್ಟದಿಂದ ಸ್ಥಾನ ಪಡೆದೆ ಎಂದಿದ್ದರು. ಇದರಿಂದ ನಾನು ಕ್ಲಬ್ ಬಿಟ್ಟೆ ಎಂದು ತನ್ನ ಅನುಭವ ಹಂಚಿಕೊಳ್ಳುತ್ತಾಳೆ.
ನಾನು ಕಪ್ಪು ವರ್ಣದವಳು ಎಂಬ ಕಾರಣಕ್ಕೆ ಪ್ರತಿ ಬಾರಿಯೂ ನನ್ನನ್ನು ಋಜುವಾತು ಮಾಡಿಕೊಳ್ಳುತ್ತಲೇ ಇರಬೇಕು. ಜನ ಅದನ್ನು ಯಾವತ್ತೂ ಅರಿಯುವುದೇ ಇಲ್ಲ. ನೀನು ಮಾತ್ರ ನನ್ನನ್ನು ಯಾವತ್ತೂ ಬೆಂಬಲಿಸುತ್ತಲೇ ಬಂದೆ ಎಂದು ಸ್ನೇಹಿತೆ ಬಾರ್ಬಿ ಬಳಿ ನಿಕ್ಕಿ ಹೇಳುತ್ತಾಳೆ.
https://twitter.com/_leanneclayton/status/1314177249436930055?ref_src=twsrc%5Etfw%7Ctwcamp%5Etweetembed%7Ctwterm%5E1314177249436930055%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fbarbie-explains-racism-in-viral-video-internet-loves-the-message-1730112-2020-10-09