ಕೋವಿಡ್-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್ ಒಂದು ವಿಶಿಷ್ಟ ಐಡಿಯಾ ಮಾಡಿದೆ.
ಜೂನ್ ಅಂತ್ಯದಿಂದ ಮತ್ತೆ ಓಪನ್ ಆಗಿರುವ ಜಾಝ್ ಲಾಂಗ್ ಎನ್ ಕೌಂಟರ್ ಬಾರ್ ತನ್ನ ಗ್ರಾಹಕರನ್ನು ಮರಳಿ ತನ್ನತ್ತ ಸೆಳೆಯಲು ಫಿಶ್ ಬೌಲ್ ರೀತಿಯ ಸ್ಕ್ರೀನ್ಗಳನ್ನು ತನ್ನ ರೆಸ್ಟಾರಂಟ್ನಲ್ಲಿ ಅಳವಡಿಸಿದೆ.
ಈ ಮೂಲಕ ಯಾವುದೇ ವ್ಯಕ್ತಿ ಕೆಮ್ಮಿದರೂ ಅಥವಾ ಸೀನಿದರೂ ಸಹ ಆತನ ಸುತ್ತ ಇರುವ ಮಂದಿಗೆ ರೋಗಾಣುಗಳು ಹಬ್ಬದಂತೆ ತಡೆಗಟ್ಟಬಹುದಾಗಿದೆ ಎಂದು ರೆಸ್ಟಾರಂಟ್ ತಿಳಿಸಿದೆ.