ಇತ್ತೀಚೆಗೆ ಬ್ಯಾಂಕ್ ಮೋಸಗಳು ವಿಪರೀತ ಹೆಚ್ಚಾಗುತ್ತಿದೆ. ಅಂಥದ್ದರಲ್ಲಿ ಅಮೆರಿಕಾದಲ್ಲಿ ಗ್ರಾಹಕರೊಬ್ಬರು ತಮ್ಮ ಖಾತೆಯಲ್ಲಿ 2.45 ಬಿಲಿಯನ್ ಯುಎಸ್ ಡಾಲರ್ ಹಣ ಹೆಚ್ಚುವರಿ ಜಮಾ ಆದ ಸಂದೇಶ ನೋಡಿ ಗಾಬರಿಗೊಂಡಿದ್ದಾರೆ.
ಬ್ಯಾಂಕ್ ಆಫ್ ಅಮೆರಿಕಾ ಗ್ರಾಹಕ, ಮನೋ ವೈದ್ಯ ಬ್ಲೇಸ್ ಅಗುಯಿರೆ ಎಂಬುವರಿಗೆ ಈ ಅನುಭವ ಆಗಿದೆ. ಬ್ಯಾಂಕ್ ಗ್ರಾಹಕ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮಾಹಿತಿ ನೋಡಿ ಬೇಸ್ತುಬಿದ್ದರು.
ಬಳಿಕ ಬ್ಯಾಂಕ್ ಆಫ್ ಅಮೆರಿಕಾವು ದೋಷವನ್ನು ಸ್ವತಃ ಕಂಡುಕೊಂಡಿದೆ. ಇದು ಡಿಸ್ ಪ್ಲೇ ಎರರ್ ಮತ್ತು ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಬ್ಯಾಂಕ್ ಆಫ್ ಅಮೆರಿಕಾ ವಕ್ತಾರ ಬಿಲ್ ಹಾಲ್ಡಿನ್ ಹೇಳಿದ್ದಾರೆ. ಇದನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವೆಬ್ ಮತ್ತು ಅವನ ಮೊಬೈಲ್ ಅಪ್ಲಿಕೇಶನ್ ಎರಡರಲ್ಲೂ ತೋರಿಸುತ್ತಿರುವ ಹಣದ ಬಗ್ಗೆ ವಿಚಾರಿಸಲು ಬ್ಲೇಸ್ ಅಗುಯಿರ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದರಂತೆ.