
ಆನ್‌ಲೈನ್ ಅಪರಾಧವನ್ನು ಸುಲಭವಾಗಿ ವರದಿ ಮಾಡಲು ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಶನ್ ರಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಹುಡುಗನೊಬ್ಬ ಪ್ರಶಸ್ತಿ ಗೆದ್ದಿದ್ದಾನೆ.
ಹದಿಹರೆಯದವರಿಗೆ ಸೈಬರ್ ಬೆದರಿಕೆ ಮತ್ತು ಸೈಬರ್ ಅಪರಾಧಗಳನ್ನು ವರದಿ ಮಾಡಲು ಸಹಾಯ ಮಾಡಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಕ್ಕಾಗಿ 17 ವರ್ಷದ ಸಾದತ್ ರೆಹಮಾನ್ 2020 ರ ಕಿಡ್ಸ್ ರೈಟ್ಸ್ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಈ ಕಾಲಘಟ್ಟದಲ್ಲಿ ಹದಿಹರೆಯದವರು ಆನ್‌ಲೈನ್ ಅಪರಾಧ ಮತ್ತು ಸೈಬರ್ ಬೆದರಿಕೆಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಹೀಗಾಗಿ ಅಪ್ಲಿಕೇಷನ್ ತಯಾರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕ ಕಾರಣದಿಂದ ಆನ್‌ಲೈನ್‌ನಲ್ಲಿ ನಡೆದ ಸಮಾರಂಭದಲ್ಲಿ ನೆದರ್‌ಲ್ಯಾಂಡ್ ಮೂಲದ ಕಿಡ್ಸ್ ರೈಟ್ಸ್ ಫೌಂಡೇಶನ್ ಬಹುಮಾನವನ್ನು ರೆಹಮಾನ್‌ಗೆ ನೀಡಿತು.
ಈ ಮೊಬೈಲ್ ಆನ್‌ಲೈನ್ ಬಿಹೇವಿಯರ್ ಕುರಿತು ಸುಳಿವು ಮತ್ತು ಟಿಪ್ಸ್ ನೀಡುವ ಜತೆಗೆ ಲೈಂಗಿಕ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಲು ಸಹಾಯ ಮಾಡಲಿದೆ.