OMG: ಶುಲ್ಕವಾಗಿ ತೆಂಗಿನಕಾಯಿ ಪಡೆದ ಶಾಲೆ….! 04-11-2020 6:20AM IST / No Comments / Posted In: Latest News, International ಆರ್ಥಿಕ ಕುಸಿತದ ಕಾರಣದಿಂದ ಬೋಧನಾ ಶುಲ್ಕವನ್ನೂ ಪಾವತಿಸಲಾಗದೇ ಹೆಣಗಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಇಂಡೋನೇಶಿಯಾದ ಬಾಲಿಯ ಅಕಾಡೆಮಿಯೊಂದು ಹೊಸ ಮಾರ್ಗ ನೀಡಿದೆ. ಹಣ ನೀಡಲಾಗದ ವಿದ್ಯಾರ್ಥಿಗಳು ತೆಂಗಿನ ಕಾಯಿ ಸೇರಿದಂತೆ ಇತರೆ ನೈಸರ್ಗಿಕ ಉತ್ಪನ್ನಗಳ ರೂಪದಲ್ಲಿ ಶುಲ್ಕ ಪಾವತಿ ಮಾಡಬಹುದಾಗಿದೆ. ವೀನಸ್ ಒನ್ ಟೂರಿಸಂ ಅಕಾಡೆಮಿ ತಮ್ಮ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಈ ರೀತಿಯಲ್ಲಿ ಪರಿಹಾರ ನೀಡಿದೆ. ಮೊದಲು ವಿದ್ಯಾರ್ಥಿಗಳಿಗೆ ಕಂತಿನ ರೂಪದಲ್ಲಿ ಶುಲ್ಕ ಪಾವತಿ ಮಾಡಲು ಹೇಳಿದ್ದೆವು. ಇದೀಗ ಈ ಮಾರ್ಗವನ್ನ ಇನ್ನಷ್ಟು ಸುಲಭ ಮಾಡಲಿಕ್ಕೋಸ್ಕರ ತೆಂಗಿನ ಕಾಯಿಗಳನ್ನ ಫೀಸ್ ರೂಪದಲ್ಲಿ ಕೇಳಿದ್ದೇನೆ. ನಾವು ತೆಂಗಿನ ಎಣ್ಣೆಯನ್ನ ಉತ್ಪಾದನೆ ಮಾಡುತ್ತೇವೆ. ಹೀಗಾಗಿ ವಿದ್ಯಾರ್ಥಿಗಳು ತೆಂಗಿನ ಕಾಯಿ ರೂಪದಲ್ಲಿ ಫೀಸ್ ಭರಿಸಲು ಅವಕಾಶ ನೀಡಿದ್ದೇವೆ ಅಂತಾ ಅಕಾಡೆಮಿ ಮಾಲೀಕರು ಹೇಳಿದ್ದಾರೆ. ಕೇವಲ ತೆಂಗಿನ ಕಾಯಿ ಮಾತ್ರವಲ್ಲದೇ ಗಿಡಮೂಲಿಕೆ ಸಾಬೂನುಗಳನ್ನ ಉತ್ಪಾದಿಸಲು ಬಳಕೆ ಮಾಡಲಾಗುವ ಮೋರಿಂಗಾ ಎಲೆ ಹಾಗೂ ಗೊಟುಕೋಲಾ ಎಲೆಗಳನ್ನೂ ಶುಲ್ಕದ ರೂಪದಲ್ಲಿ ಸಂಗ್ರಹ ಮಾಡಲಾಗ್ತಿದೆ.