ಕೊರೊನಾ ಸೋಂಕು ವಿಶ್ವವನ್ನು ಕಾಡ್ತಿದೆ. ಆದ್ರೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಬೇರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು ಎನ್ನಲಾಗಿದೆ. ಈಗ ಹೊಸ ಸಂಶೋಧನೆಯೊಂದು ಬೋಳು ತಲೆ ಹೊಂದಿರುವವರಿಗೆ ಕೊರೊನಾ ಅಪಾಯ ಹೆಚ್ಚು ಎಂಬ ವಿಷ್ಯವನ್ನು ತಿಳಿಸಿದೆ.
ಪುರುಷ ಹಾರ್ಮೋನ್ ಸೂಕ್ಷ್ಮತೆಯ ಮಟ್ಟ 22 ಕ್ಕಿಂತ ಹೆಚ್ಚಿರುವ ಪುರುಷರು ಸಾಮಾನ್ಯ ಜನರಿಗಿಂತ 2.5 ಪಟ್ಟು ಹೆಚ್ಚು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ. 65 ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಅದ್ರಲ್ಲಿ ಅನುವಂಶಿಕ ಬೋಳು ತಲೆ ಹೊಂದಿರುವವರು ಸೇರಿದ್ದಾರೆ.
ತಜ್ಞರು ಅನುವಂಶಿಕ ಹಾಗೂ ಡಿಎನ್ಎ ಪರೀಕ್ಷೆ ಕೂಡ ಮಾಡಿಸಿದ್ದಾರೆ. ಈ ವೇಳೆ ಪುರುಷರ ಬೋಳು ತಲೆ ಮೇಲೂ ಪರೀಕ್ಷೆ ನಡೆಸಲಾಗಿದೆ. ಇದನ್ನು ಆಂಡ್ರೊಜೆನೆಟಿಕ್ ಅಲೋಪೆಸಿಯಾ ಎಂದೂ ಕರೆಯುತ್ತಾರೆ. ವಿಶ್ವದ ಶೇಕಡಾ 50 ರಷ್ಟು ಪುರುಷರು, 50 ವರ್ಷಕ್ಕಿಂತ ಮೇಲ್ಪಟ್ಟವರು, ಬೋಳು ತಲೆ ಸಮಸ್ಯೆಗೆ ಒಳಗಾಗ್ತಿದ್ದಾರೆ. ಪುರುಷರ ಬೋಳು ತಲೆಯನ್ನು ಆಂಡ್ರೊಜೆನ್ ರಿಸೆಪ್ಟರ್ ನಿಯಂತ್ರಿಸುತ್ತದೆ. ಇದ್ರಿಂದ ಪುರುಷರ ದೇಹವು ಸೂಕ್ಷ್ಮವಾಗಿರುತ್ತದೆ. ಆಂಡ್ರೋಜೆನ್ ಗಳು ಟಿಎಂಪಿಆರ್ಎಸ್ಎಸ್ 2 ಕಿಣ್ವದೊಂದಿಗೆ ಸಂಬಂಧ ಹೊಂದಿವೆ.