
ನೀರಿನ ಪ್ಲಾಸ್ಟಿಕ್ ಬಾಟಲ್ ತಿರುಗಿಸಿ ಒಗೆದು ನೇರವಾಗಿ ನಿಲ್ಲಿಸುವ ಚಾಲೆಂಜ್ ವಿದೇಶಗಳಲ್ಲಿ ಪ್ರಸಿದ್ಧ. ಈಗ ಬಾಟಲ್ ಫ್ಲಿಫ್ ಚಾಲೆಂಜ್ ಒಂದರ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರೆಕ್ಸ್ ಚಾಪ್‌ಮ್ಯಾನ್ ಎಂಬುವವರು ಕೇವಲ 6 ಸೆಕೆಂಡ್ ವಿಡಿಯೋವನ್ನು ಅ.9 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. “ಇಂದು ಈ ನಗು ಬೇಕಿತ್ತು” ಎಂದಷ್ಟೇ ಕ್ಯಾಪ್ಶನ್ ನೀಡಿದ್ದಾರೆ. ಎರಡೇ ದಿನದಲ್ಲಿ ವಿಡಿಯೋವನ್ನು 9.6 ಲಕ್ಷ ಜನ ವೀಕ್ಷಿಸಿದ್ದು, 14.5 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ. 76.4 ಸಾವಿರ ಜನ ಲೈಕ್ ಮಾಡಿದ್ದಾರೆ.
ಸುಮಾರು ಒಂದು ವರ್ಷದ ಬಾಲಕಿಯ ಎದುರು ಆಕೆಯ ಅಮ್ಮ ಬಾಟಲ್ ಚಾಲೆಂಜ್ ಪ್ರದರ್ಶಿಸುತ್ತಾಳೆ. ಬಾಲಕಿ ನೀಡುವ ಎಕ್ಸ್ ಪ್ರೆಶನ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಮ್ಮ ತಿರುಗಿಸಿದ ಬಾಟಲ್ ಸರಿಯಾಗಿ ನಿಲ್ಲದೇಬಿದ್ದು ಹೋಗುತ್ತದೆ. ಆಗ ಅಮ್ಮ ನೀನು ಸೋತೆ ಎಂದು ಖುಷಿಪಡುವ ಬಾಲಕಿ ತಾನು ಪ್ರಯತ್ನಿಸುತ್ತಾಳೆ. ಅಕಸ್ಮಾತ್ ಬಾಟಲ್ ನೇರವಾಗಿ ನಿಂತು ಬಿಡುತ್ತದೆ. ಆಗ ತನ್ನ ಮೂತಿ ಉದ್ದ ಮಾಡಿ ಅಚ್ಚರಿ, ಖುಷಿ ವ್ಯಕ್ತಪಡಿಸುವ ರೀತಿ ಎಂಥವರನ್ನೂ ಮರುಳು ಮಾಡುತ್ತದೆ.