alex Certify ಸುಪ್ರಸಿದ್ಧ ಆಟಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕಪ್ಪು ಬಣ್ಣದ ಬೇಬಿ ನ್ಯಾನ್ಸಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಪ್ರಸಿದ್ಧ ಆಟಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕಪ್ಪು ಬಣ್ಣದ ಬೇಬಿ ನ್ಯಾನ್ಸಿ..!

ಬೇಬಿ ನ್ಯಾನ್ಸಿ ಎಂಬ ಹೆಸರಿನ ಕಪ್ಪು ವರ್ಣದ ಗೊಂಬೆ ನ್ಯಾಷನಲ್​ ಟಾಯ್​ ಹಾಲ್​ ಆಫ್​ ಫೇಮ್​ಗೆ ಕಾಲಿಟ್ಟಿದೆ. ಈ ಮೂಲಕ ಅಮೇರಿಕ ಹಾಲ್​ ಆಫ್​ ಫೇಮ್​ಗೆ ಸೇರಿದ ಮೊದಲ ಕಪ್ಪು ಬಣ್ಣದ ಗೊಂಬೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕಪ್ಪು ಬಣ್ಣದ ಚರ್ಮ ಹೊಂದಿರುವ ಈ ಗೊಂಬೆಯನ್ನ 1968ರಲ್ಲಿ ಶಿಂಡಾನಾ ಟಾಯ್ಸ್ ಎಂಬ ಕಂಪನಿ ನಿರ್ಮಾಣ ಮಾಡಿತು. ಬಿಳಿ ಚರ್ಮ ಮಾತ್ರ ಸೌಂದರ್ಯದ ಸಂಕೇತ ಎಂಬುದನ್ನ ಪ್ರಶ್ನೆ ಮಾಡುವ ಉದ್ದೇಶದಿಂದ ಈ ಆಟಿಕೆಯನ್ನ ನಿರ್ಮಾಣ ಮಾಡಲಾಗಿತ್ತು.

ಗೊಂಬೆಗಳು ಅಂದರೆ ಸಾಕು. ಶ್ವೇತ ವರ್ಣ, ತೆಳ್ಳಗಿನ ದೇಹ, ನೇರ ಕೂದಲು ಎಂಬ ಕಲ್ಪನೆ ಎಲ್ಲರ ಕಣ್ಣ ಮುಂದೆ ಬರುತ್ತೆ. ಆದರೆ ಈ ಅಭಿಪ್ರಾಯಕ್ಕೆ ಸವಾಲಾಗಿ ಈ ವಿಭಿನ್ನ ಬಣ್ಣದ ಗೊಂಬೆಯನ್ನ ನಿರ್ಮಾಣ ಮಾಡಲಾಗಿತ್ತು. ಇದೀಗ ಹಾಲ್​ ಆಫ್​ ಫೇಮ್​​ ಪಟ್ಟಿಯಲ್ಲೂ ಸೇರುವ ಮೂಲಕ ಈ ಬೇಬಿ ನ್ಯಾನ್ಸಿ ಸಾಧನೆ ಮಾಡಿದೆ.

ಬೇಬಿ ನ್ಯಾನ್ಸಿ ಜೊತೆಗೆ ಜೆಂಗಾ, ಸೈಡ್​ವಾಕ್​ ಚಾಕ್​ ಹಾಗೂ ಇನ್ನೂ ಅನೇಕ ಆಟಿಕೆಗಳು ಈ ಸುಪ್ರಸಿದ್ಧ ಪಟ್ಟಿಯ ಸಾಲಿನಲ್ಲಿ ಸ್ಥಾನ ಪಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...