ಪೋಸ್ಟ್ ಬಾಕ್ಸ್ ನಲ್ಲಿ ಏನಿರುತ್ತೆ..? ಎಲ್ಲರಿಗೂ ಗೊತ್ತಿರುವ ಹಾಗೆ ಪತ್ರಗಳು, ಪೋಸ್ಟ್ ಮೂಲಕ ಕಳಿಸಿದ ಇನ್ನಿತರ ವಸ್ತುಗಳು ಇರುತ್ತವೆ. ಆದರೆ, ಇಲ್ಲೊಂದು ಪೋಸ್ಟ್ ಬಾಕ್ಸ್ ಸಮೀಪ ಹೋದಾಗ ಕಾದಿತ್ತು ಶಾಕ್. ಅಲ್ಲಿ ಕಾಂಗರೂ ಮರಿಯೊಂದು ಸಿಲುಕಿಕೊಂಡು ಒದ್ದಾಡುತ್ತಿತ್ತು..!
ಆಸ್ಟ್ರೇಲಿಯಾದ ವೂಂಗೂಲ್ಬಾ ನಗರದ ಪೋಸ್ಟ್ ಬಾಕ್ಸ್ ಒಂದರಲ್ಲಿ ಕಾಂಗರೂ ಮರಿ ಸಿಲುಕಿತ್ತು. ಇದನ್ನು ಸ್ಥಳೀಯರು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದರು.
ಬಳಿಕ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿಯು ಪೋಸ್ಟ್ ಮ್ಯಾನ್ ಗೆ ಕರೆಮಾಡಿ ಪೋಸ್ಟ್ ಬಾಕ್ಸ್ ನ ಕೀಯನ್ನು ಪಡೆದಿದ್ದಾರೆ. ಬಳಿಕ ಕೀ ತೆರೆದು ಕಾಂಗರೂ ಮರಿಯನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಅದು ಅರೆಪ್ರಜ್ಞಾವಸ್ಥೆಯೊಂದಿಗೆ ಉಸಿರಾಟವನ್ನು ಮಾಡುತ್ತಿತ್ತು. ಇದನ್ನು ರಕ್ಷಿಸಿ, ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಆದರೆ, ಲಾಕ್ ಆಗಿರುವ ಪೋಸ್ಟ್ ಬಾಕ್ಸ್ ಒಳಗೆ ಕಾಂಗರೂ ಮರಿ ಹೇಗೆ ಹೋಯಿತು ಎಂಬುದೇ ಸದ್ಯದ ಪ್ರಶ್ನೆಯಾಗಿ ಎಲ್ಲರನ್ನೂ ಕಾಡುತ್ತಿದ್ದು, ಇದಕ್ಕೆ ನೆಟ್ಟಿಗರಿಂದಲೂ ಸಾಕಷ್ಟು ಕಮೆಂಟ್ ಗಳು ಬಂದಿದೆ. ಪ್ರಪಂಚದಲ್ಲೇ ಮನುಷ್ಯ ಅತಿ ಕೆಟ್ಟ ಜೀವಿ ಎಂದು ಒಬ್ಬ ಕಮೆಂಟ್ ಮಾಡಿದ್ದಾರೆ.