ರಾತ್ರಿ ವೇಳೆ ಬೀದಿಗಳಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿರುವ ವೇಳೆ ನಾಯಿಗಳ ಗುಂಪು ಎದುರಿಗೆ ಬಂದರೆ ಎಂಥವರಿಗೂ ಭಾರೀ ಗಾಬರಿಯಾಗುತ್ತದೆ. ಅದೇ ನಾಯಿಯೊಂದು ಅಸ್ತ್ರವನ್ನು ನಿಮ್ಮತ್ತ ತೋರುತ್ತಿರುವುದನ್ನು ಕಂಡಾಗ ನಿಮಗೆ ಏನನಿಸುತ್ತದೆ?
ಕೆಂಟುಕಿಯ ವಿಲಿಯಮ್ಸ್‌ಬರ್ಗ್‌ನಲ್ಲಿ ಪೋಸ್ಟ್‌ಮನ್ ಒಬ್ಬರಿಗೆ ಇಂಥದ್ದೇ ಅನುಭವವಾಗಿದೆ. ಟಿಮ್ ಸ್ಮಿತ್ ಹೆಸರಿನ ಈ ಪೋಸ್ಟ್‌ಮನ್ ತಮ್ಮ ಕರ್ತವ್ಯದ ಮೇಲೆ ಗ್ರಾಮವೊಂದಕ್ಕೆ ಭೇಟಿ ಕೊಟ್ಟ ವೇಳೆ ನಾಯಿಯೊಂದು ಕೊಡಲಿ ಹಿಡಿದುಕೊಂಡು ತನ್ನ ಸಹಚರನೊಂದಿಗೆ ನಿಂತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಕೊಡಲಿ ಶೂರ ನಾಯಿಯ ಫೋಟೋ ಸೆರೆ ಹಿಡಿದ ಸ್ಮಿತ್ ಅದನ್ನು ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಪತ್ರ ವಿತರಿಸಲು ಹೋದ ದಾರಿಯಲ್ಲಿ ನಾನು ಇದನ್ನು ಕಂಡಿದ್ದೇನೆ. ನಮ್ಮ ಅಂಚೆಯಣ್ಣಂದಿರು ಅಂಚೆಯನ್ನು ಕೆಲವೊಮ್ಮೆ ಸರಿಯಾದ ಸಮಯಕ್ಕೆ ತಲುಪಿಸಲು ಸಾಧ್ಯವಾದೇ ಇರಲು ಸಾಕಷ್ಟು ಕಾರಣಗಳಿವೆ. ಇದು ಅವುಗಳಲ್ಲಿ ಒಂದು. ನಾನು ನಾಯಿಯನ್ನು ಹೇಗೋ ಹ್ಯಾಂಡಲ್ ಮಾಡಬಲ್ಲೆ. ಆದರೆ ಕೊಡಲಿ ಹಿಡಿದ ನಾಯಿಯನ್ನು ಅಲ್ಲ” ಎಂದು ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
https://www.facebook.com/tim.smith.9484/posts/3920921137958942