ಆಸ್ಟ್ರಿಯಾದ ವ್ಯಕ್ತಿಯೊಬ್ಬರಿಗೆ ವಿಚಿತ್ರ ತಪ್ಪೊಂದಕ್ಕೆ 500 ಯೂರೋಗಳ (44,000 ರೂ.ಗಳು) ದಂಡ ವಿಧಿಸಲಾಗಿದೆ. ಸಾರ್ವಜನಿಕ ಜಾಗದಲ್ಲಿ ಜೋರಾಗಿ ಹೂಸು ಬಿಟ್ಟ ಎಂಬ ಕಾರಣಕ್ಕೆ ಈತನಿಗೆ ದಂಡ ವಿಧಿಸಲಾಗಿತ್ತು. ಈ ವಿಚಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ ಈತನಿಗೆ ದಂಡದ ಮೊತ್ತವನ್ನು 500 ಯೂರೋಗಳಿಂದ 100 ಯೂರೋಗಳಿಗೆ (8892 ರೂ) ಇಳಿಸಲಾಗಿದೆ.
ವಿಯೆನ್ನಾದಲ್ಲಿ ಈ ಘಟನೆ ನಡೆದಿದ್ದು, ’ಪ್ರಚೋದನಾತ್ಮಕವಾಗಿ ಹೂಸು ಬಿಡುವ ಮೂಲಕ ’ಸಾರ್ವಜನಿಕ ಗಾಂಭೀರ್ಯತೆಗೆ ಧಕ್ಕೆಯಾಗಿದ್ದ’ ಎಂದು ಪೊಲೀಸರು ಈತನ ಮೇಲೆ ಆರೋಪ ಹೊರಿಸಿದ್ದರು. ಆತನ ಪರಿಚಯದ ಬಗ್ಗೆ ಕೇಳುತ್ತಲೇ ಆತನಿಗೆ ಪ್ರಚೋದನಾತ್ಮಕ ಹಾಗೂ ಅಸಹಕಾರಿ ಮನೋಭಾವನೆಯ ಪ್ರತಿಕ್ರಿಯೆಗಳು ಸಿಕ್ಕವು ಎಂದು ಪೊಲೀಸರು ಇದೇ ವೇಳೆ ತಿಳಿಸಿದ್ದಾರೆ.
ವಿದ್ಯುತ್ ಪ್ರವಹಿಸಿ ಅಸ್ವಸ್ಥ: ಚಿಕಿತ್ಸೆ ನೀಡದೆ ಹೊರನಡೆದ ವೈದ್ಯ – ನರಳಿ ನರಳಿ ಪ್ರಾಣಬಿಟ್ಟ ಬಾಲಕ
ತನ್ನ ’ತಪ್ಪು’ ಒಂದು ಜೈವಿಕ ಕ್ರಿಯೆಯಾಗಿದ್ದು, ’ಉದ್ದೇಶಪೂರಿತವಾಗಿ ಮಾಡಿದರೂ ಸಹ’ ’ಗಾಳಿ ಬಿಡುವುದನ್ನು’ ಅಭಿವ್ಯಕ್ತಿ ಸ್ವಾತಂತ್ರ‍್ಯವೆಂದು ಪರಿಗಣಿಸಬೇಕು ಎಂದು ಕೋರ್ಟ್‌ನಲ್ಲಿ ಈತ ವಾದಿಸಿದ್ದಾನೆ.