ಮೆಲ್ಬೋರ್ನ್: ಐದು ನಿಮಿಷ ಕೈಯ್ಯಲ್ಲಿ ಐಸ್ ಹಿಡಿದುಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ಸಂಪೂರ್ಣ ಐಸ್ ತುಂಬಿದ ಬಾಕ್ಸ್ನಲ್ಲಿ ವ್ಯಕ್ತಿಯೊಬ್ಬ ಎರಡೂವರೆ ತಾಸು ಕಳೆದು ದಾಖಲೆ ಬರೆದಿದ್ದಾನೆ.
ಆಸ್ಟ್ರೇಲಿಯಾದ ಜೋಸೆಫ್ ಕೊಯ್ಬ್ರೆಲ್ ಎಂಬಾತ ಕೇವಲ ಸ್ವಿಮ್ ಸೂಟ್ ಧರಿಸಿ ತನ್ನ ಭುಜದವರೆಗೂ 440 ಪೌಂಡ್(200 ಕೆಜಿ) ಐಸ್ ತುಂಬಿದ ಗ್ಲಾಸ್ ಬಾಕ್ಸ್ನಲ್ಲಿ 2 ತಾಸು 30 ನಿಮಿಷ 57 ಸೆಕೆಂಡ್ ಕುಳಿತು ಅಚ್ಚರಿ ಮೂಡಿಸಿದ್ದಾನೆ.
ಜೋಸೆಫ್ 2019 ರಲ್ಲಿ ಲೋವರ್ ಆಸ್ಟ್ರೇಲಿಯಾದ ಮೆಲ್ಕ್ ಟೌನ್ ಹಾಲ್ನಲ್ಲಿ 30 ನಿಮಿಷ ಐಸ್ನಲ್ಲಿ ನಿಂತು ದಾಖಲೆ ಬರೆದಿದ್ದ. ಈಗ ತನ್ನದೇ ದಾಖಲೆ ಬರೆದಿದ್ದಾನೆ. ‘ನಾನು ಸಕಾರಾತ್ಮಕ ಶಕ್ತಿ, ಯೋಚನೆ ಮಾಡಿ ನೋವನ್ನು ಮರೆತೆ. ಇದರಿಂದ ಇಷ್ಟು ಹೊತ್ತು ಐಸ್ನಲ್ಲಿ ನಿಲ್ಲಲು ಸಾಧ್ಯವಾಯಿತು’ ಎಂದು ಜೋಸೆಫ್ ಹೇಳಿದ್ದಾರೆ.