ಆಸ್ಟ್ರೇಲಿಯಾದ ಉತ್ತರ ಟಾಸ್ಮೇನಿಯಾದಲ್ಲಿರುವ ಜಾಗವೊಂದು ರಾತ್ರಿಯೆಲ್ಲಾ ಎಚ್ಚರವಾಗಿದ್ದುಕೊಂಡು ಹಿಮದ ತುಂಡುಗಳನ್ನು ಕಣ್ತುಂಬಿಕೊಳ್ಳುತ್ತಿದೆ. ಲೌನ್ಸೆಸ್ಟನ್ ಹೆಸರಿನ ಈ ನಗರವು 1970ರಿಂದ ಇತ್ತೀಚಿನ ಅವಧಿಯಲ್ಲೇ ಅತ್ಯಂತ ಪ್ರಖರವಾದ ಹಿಮಪಾತವನ್ನು ಕಂಡಿದೆ.
ಟಾಸ್ಮೇನಿಯಾದ ಹವಾಮಾನ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಈ “winter wonderland” ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದು ಅವುಗಳನ್ನು ಅಲ್ಲಿನ ಜನರು ನೋಡಿದ್ದಾರೆ ಹಾಗೂ ತಮ್ಮೊಟ್ಟಿಗೆ ಇರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಲೌನ್ಸೆಸ್ಟನ್ ವಿಮಾನ ನಿಲ್ದಾಣವು ಹಿಮದಿಂದ ಆವೃತವಾಗಿರುವ ಚಿತ್ರಗಳನ್ನು ಸಹ ಶೇರ್ ಮಾಡಲಾಗಿದ್ದು, 2.4 ಡಿಗ್ರಿ ತಾಪಮಾದಲ್ಲಿ ವಾತಾವರಣ ಹೇಗಿರುತ್ತದೆ ಎಂಬ ಒಂದು ಝಲಕ್ ನ್ನು ನೀಡಲಾಗಿದೆ.