ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ ವಿಮಾನ ಏರಲು ಯುವತಿಗೆ ಅವಕಾಶ ನೀಡಲಿಲ್ಲ. ಇದು ಯುವತಿಯನ್ನು ಅಚ್ಚರಿಗೊಳಿಸಿದೆ.
ನ್ಯೂಸ್ ಡಾಟ್ ಕಾಮ್ ವರದಿ ಪ್ರಕಾರ, ವರ್ಜಿನ್ ಆಸ್ಟ್ರೇಲಿಯಾ ವಿಮಾನದಲ್ಲಿ ಘಟನೆ ನಡೆದಿದೆ. ಆಕೆ ಹೆಚ್ಚು ಮೈ ಕಾಣಿಸುವ ಬಟ್ಟೆ ಧರಿಸಿದ್ದ ಕಾರಣ ವಿಮಾನ ಏರಲು ಅವಕಾಶ ನೀಡಲಿಲ್ಲ. 23 ವರ್ಷದ ಕ್ಯಾಥರೀನ್ ಬೆಂಪ್ಟನ್ ಇದ್ರಿಂದ ಅವಮಾನಕ್ಕೊಳಗಾಗಿದ್ದಾಳೆ. ವಿಮಾನ ಅಡಿಲೇಡ್ ನಿಂದ ಗೋಲ್ಡ್ ಕೋಸ್ಟ್ ಗೆ ಹೋಗ್ತಿದ್ದ ವಿಎ1477 ವಿಮಾನದಲ್ಲಿ ಘಟನೆ ನಡೆದಿದೆ.
ವಿಮಾನ ಏರುವ ಮೊದಲೇ ಸಿಬ್ಬಂದಿ ನನ್ನನ್ನು ಸಂಪರ್ಕಿಸಿದ್ದರು ಎಂದು ಕ್ಯಾಥರೀನ್ ಹೇಳಿದ್ದಾಳೆ. ಕ್ಯಾಥರೀನ್ ಪ್ಯಾಂಟ್, ಕ್ರಾಪ್ ಟಾಪ್ ಧರಿಸಿದ್ದಳು. ಈ ಬಟ್ಟೆಯಲ್ಲಿ ಆಕೆ ದೇಹ ಹೆಚ್ಚು ಕಾಣ್ತಿದೆ ಎನ್ನುವ ಕಾರಣಕ್ಕೆ ಪೈಲಟ್ ನನ್ನನ್ನು ವಿಮಾನದಲ್ಲಿ ಹತ್ತಿಸಿಕೊಳ್ಳಲು ಒಪ್ಪುತ್ತಿಲ್ಲವೆಂದು ಎಲ್ಲರ ಮುಂದೆ ಸಿಬ್ಬಂದಿ ನನಗೆ ಹೇಳಿದ್ದಾರೆಂದು ಕ್ಯಾಥರೀನ್ ಹೇಳಿದ್ದಾಳೆ.