ಇತ್ತೀಚಿಗೆ ಭಾರತದ ಗಡಿಯಲ್ಲಿ ಪುಂಡಾಟಿಕೆ ಮಾಡಿದ್ದ ಚೀನಾ ಇದೀಗ ಆಸ್ಟ್ರೇಲಿಯಾದ ಸೈಬರ್ ಮೇಲೂ ದಾಳಿ ನಡೆಸಿದೆಯೇ ಎನ್ನುವ ಅನುಮಾನ ಶುರುವಾಗಿದೆ.
ಹೌದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಆಸ್ಟ್ರೇಲಿಯಾ ಸರಕಾರದ ಹಾಗೂ ಕೆಲ ಪ್ರಮುಖ ಖಾಸಗಿ ವೆಬ್‌ಸೈಟ್ ಮೇಲೆ ಕೆಲವರು ನಿಗಾ ವಹಿಸಿದ್ದಾರೆ. ಅದೊಂದು ಸುಭದ್ರ ದೇಶದಿಂದಲೇ ಈ ಕೃತ್ಯ ನಡೆದಿರಬಹುದು ಎನ್ನುವ ಮಾತನ್ನು ಹೇಳುವ ಮೂಲಕ ಅನುಮಾನ ಹೊರಹಾಕಿದ್ದಾರೆ.
ಇನ್ನು ವಿಯಾಟ್ನಂ ಮೀನುಗಾರಿಕ ದೋಣಿಗಳ ಮೇಲೆ ಚೀನಾ ನೌಕಾಪಡೆ ದಾಳಿ ನಡೆಸಿದ್ದು, ದಕ್ಷಿಣ ಚೀನಾ ಭಾಗದಲ್ಲಿ ನಡೆದಿರುವ ಈ ದಾಳಿಯ ಪ್ರದೇಶ ತಮ್ಮದು ಎಂದು ವಾದಿಸುತ್ತಿದೆ.
ಇನ್ನು ಜಪಾನ್ ದೇಶದ ಮೇಲೂ ಕಣ್ಣಿಟ್ಟಿರುವ ಚೀನಾ, ಕಳೆದ 66 ದಿನಗಳಿಂದ ಸಂಕಾಕು ದ್ವೀಪದ ಬಳಿ ವೆಸೆಲ್‌ಗಳನ್ನು ಇರಿಸಿದೆ ಅಂತೆ.