ಸಾಮಾನ್ಯವಾಗಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಗಳು 10 ರಿಂದ 12 ವರ್ಷ ಆಯುಷ್ಯ ಹೊಂದಿರುತ್ತವೆ. ಆದರೆ, ಇಲ್ಲೊಂದು ಗೋಲ್ಡನ್ ರಿಟ್ರೀವರ್ ನಾಯಿ ಸಾಮಾನ್ಯಕ್ಕಿಂತ ಡಬಲ್ ಆಯುಷ್ಯ ಪಡೆದಿದೆ.
ಓಕ್ಲ್ಯಾಂಡ್ ನ ಟೆನ್ನೆಸ್ಸೀ ನಗರದ ಜೆನ್ನಿಫರ್ ಹಾಗೂ ಸ್ಟೀವ್ ಹೆಟ್ಟರ್ ಶೀಡ್ ಎಂಬುವವರು ಸಾಕಿದ ಅಗಸ್ಟ್ ಎಂಬ ಹೆಣ್ಣು ನಾಯಿ ಕಳೆದ ಏಪ್ರಿಲ್ ನಲ್ಲಿ 20ನೇ ವರ್ಷಕ್ಕೆ ಕಾಲಿಟ್ಟಿದೆ. ಆ ಮೂಲಕ ವಿಶ್ವದ ಅತಿ ಹಿರಿಯ ಗೋಲ್ಡನ್ ರಿಟ್ರೀವರ್ ನಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೆನ್ನಿಫರ್ ಹಾಗೂ ಸ್ಟೀವ್ ಗೋಲ್ಡನ್ ರಿಟ್ರೀವರ್ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅವರು 14ನೇ ವರ್ಷಕ್ಕೆ ಅಗಸ್ಟ್ ಳನ್ನು ದತ್ತು ಪಡೆದರು. ನಾಯಿ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡ ಕೇಕ್ ಕಟ್ ಮಾಡಿ, ಹ್ಯಾಪಿ ಬರ್ತಡೆ ಅಗಸ್ಟ್ ಎಂಬ ಫಲಕ ಬರೆಸಿ ಸಂಭ್ರಮಾಚರಣೆ ಮಾಡಿದ್ದಾರೆ.
ರೋಗ ಬಾರದೇ ಇದ್ದರೆ, ನಿರಂತರ ಆರೋಗ್ಯ ಪರೀಕ್ಷೆ ಹಾಗೂ ಒಳ್ಳೆಯ ಆಹಾರ ಪದ್ಧತಿ ಆ ನಾಯಿಗಳ ಆಯುಷ್ಯವನ್ನು ವೃದ್ಧಿಸುತ್ತದೆ.