ಪಾಕಿಸ್ತಾನದ ಪೇಶಾವರದ ಮದರಸಾ ಒಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆ. 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮದರಸಾ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಗಾಯಗೊಂಡವರಲ್ಲಿ ಹೆಚ್ಚಿನವರು ಮಕ್ಕಳು ಎನ್ನಲಾಗಿದೆ.
ಪೇಶಾವರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನ್ಸೂರ್ ಅಮನ್, ಸ್ಫೋಟಕ್ಕೆ ಕಾರಣ ಪತ್ತೆಯಾಗಿಲ್ಲ ಎಂದಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರಬಹುದು ಎನ್ನಲಾಗ್ತಿದೆ. ಆದ್ರೆ ಇದಕ್ಕೆ ಸರಿಯಾದ ಪುರಾವೆ ಸಿಕ್ಕಿಲ್ಲ. ಗಾಯಾಳುಗಳನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಮಕ್ಕಳ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಆರಂಭಿಕ ತನಿಖೆಯಲ್ಲಿ, ಇದು ಐಇಡಿ ಸ್ಫೋಟದಂತೆ ಕಾಣುತ್ತದೆ. ಸುಮಾರು 5 ಕೆ.ಜಿ ಸ್ಫೋಟಕ ಬಳಸಿರುವ ಸಾಧ್ಯತೆಯಿದೆ ಎಂದು ಮನ್ಸೂರ್ ಹೇಳಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.ಮಕ್ಕಳಿಗೆ ಖುರಾನ್ ಶಿಕ್ಷಣ ಹೇಳಲಾಗ್ತಿತ್ತು. ಅಪರಿಚಿತನೊಬ್ಬ ಮದರಸಾ ಬಳಿ ಚೀಲ ಇಟ್ಟು ಹೋಗಿದ್ದ ಎನ್ನಲಾಗ್ತಿದೆ.