
ಢಾಕಾ: ಪ್ರಯಾಣಿಕರಿದ್ದ ದೋಣಿ ಮುಳುಗಿ ಕನಿಷ್ಠ 17 ಮಂದಿ ಮೃತಪಟ್ಟ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ನೆಟ್ರೋಕೋನ ಜಿಲ್ಲೆಯಲ್ಲಿ 50 ಜನ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದೆ. 30 ಮಂದಿ ರಕ್ಷಿಸಲಾಗಿದೆ. 17 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ರಾಜಧಾನಿ ಢಾಕಾದಿಂದ ಉತ್ತರಕ್ಕೆ 134 ಕಿಲೋಮೀಟರ್ ದೂರದ ಮದನ್ ಉಪಜೆಲಾದಲ್ಲಿ ಘಟನೆ ನಡೆದಿದೆ. 230 ಕ್ಕೂ ಹೆಚ್ಚು ನದಿಗಳಿಂದ ಕೂಡಿರುವ ಬಾಂಗ್ಲಾದೇಶದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ ಎನ್ನಲಾಗಿದ್ದರೂ ಇವತ್ತು ಘೋರ ದುರಂತವೇ ನಡೆದಿದೆ.
ಸುಮಾರು 160 ದಶಲಕ್ಷ ಜನ ಸಂಖ್ಯೆ ಇರುವ ದೇಶದ ಮೂರನೇ ಒಂದು ಭಾಗದಷ್ಟು ಜನ ಮಾನ್ಸೂನ್ ಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.