ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.
ಚೀನಾ ಯಾವುದೇ ತಪ್ಪು ಮಾಡಿಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ಟೀಕಿಸಿರುವ ಅವರು, ಕೊರೊನಾ ವೈರಸ್ ಹರಡಲು ಚೀನಾ ಕಾರಣವಾಗಿದೆ. ಇದನ್ನು ನಾವು ಇಡೀ ವಿಶ್ವಕ್ಕೆ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ಚೀನಾ ವಸ್ತುಗಳು ಮತ್ತು ತಂತ್ರಜ್ಞಾನವನ್ನು ಬಳಸುವುದು ಸರಿಯಲ್ಲ. ಇದರಿಂದ ತಮ್ಮ ದೇಶದ ಭದ್ರತೆಗೆ ಅಪಾಯವಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ. ಈಗ ಚೀನಾ ವಸ್ತುಗಳನ್ನು ಇಂಗ್ಲೆಂಡ್ ಬ್ಯಾನ್ ಮಾಡಿದೆ. ಚೀನಾ ತಂತ್ರಜ್ಞಾನವನ್ನು ಅಮೆರಿಕ ಕೂಡ ಬಳಸುವುದಿಲ್ಲ ಎಂದು ಹೇಳಿದ್ದಾರೆ.