2015ರಲ್ಲಿ ತೆರೆಕಂಡ ದಿ ಮಾರ್ಟಿಯನ್ ಎಂಬ ಬ್ಲಾಕ್ಬಸ್ಟರ್ ಹಿಟ್ ಸಿನಿಮಾದಲ್ಲಿ ಮಂಗಳ ಗ್ರಹದಲ್ಲಿ ಸಿಲುಕಿಕೊಂಡ ಗಗನಯಾತ್ರಿಯೊಬ್ಬ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನ ಬಹಳ ಸುಂದರವಾಗಿ ಹೆಣೆಯಲಾಗಿತ್ತು. ಆದರೆ ರೀಲ್ನ ಈ ಕತೆಯನ್ನ ನಾಸಾದ ವಿಜ್ಞಾನಿಗಳು ರಿಯಲ್ ಲೈಫ್ ನಲ್ಲಿ ಭಾಗಶಃ ಸತ್ಯವಾಗಿಸಿದ್ದಾರೆ.
ಇನ್ನೂ ಸರಳವಾಗಿ ಈ ವಿಚಾರವನ್ನ ಹೇಳೋದಾದ್ರೆ ಬಾಹ್ಯಾಕಾಶದಲ್ಲಿ ಒಂದಿಲ್ಲೊಂದು ಆವಿಷ್ಕಾರವನ್ನ ಮಾಡುವ ನಾಸಾದ ಗಗನಯಾತ್ರಿಗಳು ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂಲಂಗಿ ಬೆಳೆಯನ್ನ ಬೆಳೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ.
ನಾಸಾದ ಗಗನಯಾತ್ರಿಯಾದ ಕೇಟ್ ರೂಬಿನ್ಸ್ ನವೆಂಬರ್ 30ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಾವು ಬೆಳೆದ ಮೂಲಂಗಿ ಬೆಳೆಯನ್ನ ಕಟಾವು ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಿಎನ್ಎನ್ ನೀಡಿರುವ ವರದಿ ಪ್ರಕಾರ ರೂಬಿನ್ಸ್ 20 ಮೂಲಂಗಿ ಸಸ್ಯಗಳನ್ನ ಕಟಾವು ಮಾಡಿದ್ದಾರಂತೆ. ಈ ಬೆಳೆಗಳನ್ನ 2021ರಲ್ಲಿ ಭೂಮಿಗೆ ತರುವ ಸಲುವಾಗಿ ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಲಾಗಿದೆ.
ನಾಸಾ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂಲಂಗಿ ಬೆಳೆ ಬೆಳೆದ ಪ್ರತಿ ಹಂತವನ್ನೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.