alex Certify ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೊಂದು ಪ್ರಯೋಗದಲ್ಲೂ ಆಕ್ಸ್ಫರ್ಡ್ ಲಸಿಕೆ ಪಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೊಂದು ಪ್ರಯೋಗದಲ್ಲೂ ಆಕ್ಸ್ಫರ್ಡ್ ಲಸಿಕೆ ಪಾಸ್

ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯ ಹಾಗೂ ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸುತ್ತಿರುವ ಕೊರೊನಾ ಲಸಿಕೆ ಗಂಭೀರ ಗುಣಲಕ್ಷಣಗಳಿಂದ ಬಳಲುತ್ತಿದ್ದ ವೃದ್ಧರು ಹಾಗೂ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಜುಲೈನಲ್ಲಿ ನಡೆಸಲಾದ ಪ್ರಯೋಗದಲ್ಲಿ ಈ ಲಸಿಕೆ 18 ರಿಂದ 55 ವರ್ಷದ ಆರೋಗ್ಯವಂತ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.

ಕೊರೊನಾದಿಂದ ವೃದ್ಧರೇ ಹೆಚ್ಚಾಗಿ ಸಾಯುತ್ತಿರೋದ್ರಿಂದ ಈ ವಿಚಾರದ ಬಗ್ಗೆ ಹೆಚ್ಚು ಒತ್ತನ್ನ ನೀಡಲಾಗಿತ್ತು. ಕೊರೊನಾ ವಿರುದ್ಧ ಕಂಡುಹಿಡಿಯಲಾಗುತ್ತಿರುವ ಲಸಿಕೆಗಳಲ್ಲಿ ಆಸ್ಟ್ರಾ – ಆಕ್ಸ್​ಫರ್ಡ್​ ಲಸಿಕೆ ಕೂಡ ಮುಂಚೂಣಿಯಲ್ಲಿದೆ.

ತಾತ್ಕಾಲಿಕವಾಗಿ ಪ್ರಯೋಗ ಸ್ಥಗಿತಗೊಳಿಸಿದ್ದ ಈ ಲಸಿಕೆ ಇದೀಗ ಅಮೆರಿಕದಲ್ಲಿ ಕೊನೆಯಂತದ ಪ್ರಯೋಗವನ್ನ ನಡೆಸುತ್ತಿದೆ. ಹಿಂದಿನ ಪ್ರಯೋಗಗಳು, ಜುಲೈನಲ್ಲಿ ಲಸಿಕೆ ಪರವಾಗಿ ಬಂದ ಫಲಿತಾಂಶಗಳು ಆಸ್ಟ್ರಾ – ಆಕ್ಸ್​ಫರ್ಡ್​ ಲಸಿಕೆ ಮೇಲಿನ ಭರವಸೆಯನ್ನ ಇನ್ನಷ್ಟು ಹೆಚ್ಚಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...