ಭೂಮಿಗೆ ಸಮೀಪದ ಕ್ಷುದ್ರಗ್ರಹವಾದ 2020 UA ಮುಂಜಾನೆಯ ವೇಳೆ ನಮ್ಮ ಗ್ರಹದ ಅತ್ಯಂತ ಸನಿಹದಲ್ಲೇ ಹಾದು ಹೋಗಿದೆ. ಈ ಕ್ಷುದ್ರಗ್ರಹದ ಪಥವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಗನಯಾತ್ರಿಗಳು ಇದೊಂದು ಸ್ಮರಣೀಯ ಘಟನೆಯಾಗಿದೆ ಎಂದಿದ್ದಾರೆ.
ಏಳು ಮೀಟರ್ಗಳಷ್ಟು ಎತ್ತರವಿರುವ ಈ ಕ್ಷುದ್ರಗ್ರಹವೇನಾದರೂ ಭೂಮಿಯ ವಾತಾವರಣ ಪ್ರವೇಶಿಸಿದ್ದರೆ ಅದು ಅಲ್ಲೇ ಉರಿದುಹೋಗುತ್ತಿತ್ತು. ಈ ಕ್ಷುದ್ರಗ್ರಹವು ಭೂಮೇಲ್ಮೈನಿಂದ 46,000 ಕಿಮೀಗಳಷ್ಟು ದೂರದಲ್ಲಿ ಹಾದು ಹೋಗಿದೆ ಎಂದು ಅಂದಾಜಿಸಲಾಗಿದೆ. ಖಗೋಳಶಾಸ್ತ್ರೀಯ ಲೆಕ್ಕಾಚಾರದಲ್ಲಿ ಇದೊಂದು ಕೂದಲೆಳೆ ಅಂತರವಂತೆ!
ಈ ಕ್ಷುದ್ರಗ್ರಹ ಹಾರಿ ಹೋಗುವುದನ್ನು The Virtual Telescope Project ಛಾಯಾಚಿತ್ರದಲ್ಲಿ ಸೆರೆ ಹಿಡಿದಿದ್ದು, ಅದರ ಚಿತ್ರವೀಗ ವೈರಲ್ ಆಗಿದೆ.