ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟ್ಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳಲ್ಲಿ ಎರಡು ಬ್ಲ್ಯೂ ಟಿಕ್ ಇರುವ ಅಕೌಂಟ್ ಗೆ ಭಾರಿ ಬೆಲೆ ಇದೆ. ಸೆಲಿಬ್ರಿಟಿಗಳು, ಅತೀ ಹೆಚ್ಚು ಫಾಲೋವರ್ ಗಳು ಇರುವ ಅಕೌಂಟ್ ಗಳಿಗೆ ಮಾತ್ರ ಈ ಮಾರ್ಕ್ ದೊರೆಯುತ್ತದೆ.
ಇದನ್ನು ಪಡೆದವರಿಗೆ ವಿಶೇಷ ಲಾಭವೇನೂ ಇಲ್ಲವಾದರೂ ಬ್ಲ್ಯೂ ಟಿಕ್ ಬಗ್ಗೆ ಭಾರಿ ಕ್ರೇಜ್ ಮಾತ್ರವಿದೆ. ಅದನ್ನು ಪಡೆಯಲು ಹಲವರು ಏನೆಲ್ಲ ಕಸರತ್ತು ಮಾಡುತ್ತಾರೆ.
ಸ್ಯಾನ್ ಫ್ರಾನ್ಸಿಸ್ಕೊದ ಕಲಾವಿದೆಯೊಬ್ಬಳು ಬೀಚ್ ಪಕ್ಕದ ಉತ್ತಮ ಮನೆಗಳಿಗೆ ಬ್ಲ್ಯೂ ಟಿಕ್ ನೀಡುವುದಾಗಿ ಟ್ವೀಟ್ ಮಾಡಿ ಜನರನ್ನು ಬೇಸ್ತು ಬೀಳಿಸಿದ್ದಾಳೆ. ತಮಾಷೆಗಾಗಿ ಕಲಾವಿದೆ ಬೇನಿಯಲ್ ಬಾಸ್ಕಿನ್ ಮಾಡಿದ ಟ್ವೀಟನ್ನು ನಿಜ ಎಂದು ನಂಬಿದ 300 ಕ್ಕೂ ಅಧಿಕ ಜನ ಬ್ಲ್ಯೂ ಟಿಕ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
ವ್ಯಾಲೆಂಟೈನ್ಸ್ ಡೇ ಸ್ಪೆಶಲ್: ಪ್ರತಿ ಬಣ್ಣದ ಗುಲಾಬಿ ಹಿಂದಿದೆ ತರಹೇವಾರಿ ಸಂದೇಶ
ಇನ್ನು ಕೆಲವರು ಟ್ವೀಟ್ ನ ಮರ್ಮ ಅರಿತವರು ತಾವೂ ಜೋಕ್ ಮಾಡಿದ್ದಾರೆ. “ಮನೆಗಳಿಗೆ ಬ್ಲ್ಯೂ ಟಿಕ್ ಸಿಂಬಲ್ ಬಿದ್ದರೆ ಯಾರ ಮನೆಯಲ್ಲಿ ಹೆಚ್ಚಿನ ಹಣವಿದೆ ಎಂದು ಗೊತ್ತಾಗುತ್ತದೆ” ಎಂದು ಒಬ್ಬರು, “ಯಾರ ಮನೆಗೆ ಬೇಗನೇ ಬೆಂಕಿ ಬೀಳುತ್ತದೆ ಎಂಬುದು ತಿಳಿಯುತ್ತದೆ” ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.