alex Certify ಇಸ್ರೇಲ್​ನಲ್ಲಿ ಯೇಸುವಿನ ಬಾಲ್ಯದ ಮನೆ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಸ್ರೇಲ್​ನಲ್ಲಿ ಯೇಸುವಿನ ಬಾಲ್ಯದ ಮನೆ ಪತ್ತೆ….!

ನಜರೆತ್​​ನಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಯೇಸುವಿನ ಬಾಲ್ಯ ಕಾಲದ ಮನೆಯನ್ನ ಕಂಡು ಹಿಡಿದಿದ್ದೇವೆ ಅಂತಾ ಯುಕೆ ಮೂಲದ ಪುರಾತತ್ವ ತಜ್ಞರು ಹೇಳಿದ್ದಾರೆ. ಈ ಬಗ್ಗೆ ಪುರಾತತ್ವ ತಜ್ಞ ಫ್ರೋ. ಕೆನ್​ಡಾರ್ಕ್​ ತಮ್ಮ ಹೊಸ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ.

ನಜರೆತ್​ನಲ್ಲಿ ದೊರಕಿರುವ ಅವಶೇಷಗಳನ್ನ ಅಧ್ಯಯನ ಮಾಡಲು ಫ್ರೊ.ಡಾರ್ಕ್​ 14 ವರ್ಷಗಳಿಗಿಂತಲೂ ಹೆಚ್ಚು ಕಾಲತೆಗೆದುಕೊಂಡಿದ್ದಾರೆ.

ಯೇಸುವಿನ ವಾವಸ್ಥಾನ ಎನ್ನಲಾದ ಈ ಮನೆಯು 1ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗಿದೆ. ಈ ಮನೆಯಲ್ಲಿ ಯೇಸುವಿನ ತಂದೆ ಸೇಂಟ್​​ ಜೋಸೇಫ್​ ನಿರ್ಮಾಣ ಮಾಡಿದ್ದಾರೆ ಎಂದು ನಂಬಲಾಗಿದೆ. ಸೇಂಟ್​ ಜೋಸೆಫ್​ ಒಬ್ಬ ನುರಿತ ಕುಶಲಕರ್ಮಿಯಾಗಿದ್ದರು ಅಂತಾ ಹೇಳಲಾಗುತ್ತೆ.

ವರದಿಗಳ ಪ್ರಕಾರ ಈ ವಾಸಸ್ತಾನ ಚರ್ಚ್​ ಆಫ್​​ ಅನನ್ಸಿಯೇಷನ್​ ಬಳಿ ಇದೆ ಹಾಗೂ ಇದನ್ನ 1880ರ ದಶಕದಲ್ಲಿ ಕಂಡು ಹಿಡಿಯಲಾಗಿತ್ತು. ಸನ್ಯಾಸಿಗಳು ಇದನ್ನ ಯೇಸು ಬೆಳೆದ ವಾಸಸ್ಥಾನ ಎಂದು ನಂಬಿದ್ದಾರೆ. ಆದರೆ ಅವರ ನಂಬಿಕೆಯನ್ನ ಸಾಬೀತುಪಡಿಸುವಂತ ಯಾವುದೇ ಬಲವಾದ ಕುರುಹುಗಳು ಇಲ್ಲಿಯವರೆಗೂ ದೊರೆತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...