ಪ್ರವಾಸಿ ತಾಣಗಳು, ಪುರಾಣ ಪ್ರಸಿದ್ಧ ಸ್ಮಾರಕಗಳಲ್ಲಿ ತ್ಯಾಜ್ಯ ಎಸೆಯುವುದು ಬರೀ ಭಾರತದಲ್ಲಿ ಮಾತ್ರ ಇರುವ ದುರಭ್ಯಾಸ ಎಂದುಕೊಂಡಿದ್ದೆವು.
ಬ್ರಿಟನ್‌ನ ವೇಲ್ಸ್‌ನಲ್ಲಿರುವ ಕೋಸ್ಟ್ ರಾಷ್ಟ್ರೀಯ ಉದ್ಯಾನದಲ್ಲಿರುವ ಕ್ಯಾಸಲ್ ಹೆನಿಲ್ಸ್ ಐರನ್ ಗ್ರಾಮ ಒಂದು ಐತಿಹಾಸಿಕ ಪ್ರವಾಸಿ ತಾಣ. ಈ ಜಾಗವನ್ನು ಪ್ರವಾಸಿಗರಿಗೆ ಮುಕ್ತವಾಗಿ ಇಡಲಾಗಿತ್ತು. ಈ ಜಾಗದಲ್ಲಿ ಸಂಶೋಧನೆ ಮಾಡಲು ಬಂದಿದ್ದ ಲಿವರ್‌ಪೂಲ್ ವಿವಿಯ ತಂಡಕ್ಕೆ ಭಾರೀ ಶಾಕ್ ಒಂದು ಕಾದಿದೆ.
2000 ವರ್ಷಗಳ ಇತಿಹಾಸದ ಈ ಸ್ಮಾರಕದಲ್ಲಿರುವ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬಗ್ಗೆ ಅಧ್ಯಯನ ಮಾಡಲು ಬಂದಿದ್ದ ಸಂಶೋಧಕರ ತಂಡವು ಆ ಜಾಗವನ್ನು ಕೆದಕುತ್ತಾ ಸಾಗಿದಂತೆ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಕಣ್ಣಿಗೆ ಬಿದ್ದು ದಂಗಾಗಿದ್ದಾರೆ. ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿರುವ ಈ ಜಾಗದಲ್ಲಿ ತಿಂಡಿ ತೀರ್ಥಗಳ ಸಾವಿರಾರು ಪ್ಲಾಸ್ಟಿಕ್ ಪೇಪರ್‌ಗಳ ಗುಡ್ಡೆಯೇ ಕಣ್ಣ ಮುಂದೆ ಬಂದಿದೆ.
ಕಳೆದ 35 ವರ್ಷಗಳಿಂದಲೂ ವರ್ಷಕ್ಕೆ 6000ದಷ್ಟು ಶಾಲಾ ವಿದ್ಯಾಥಿಗಳು ಇಲ್ಲಿಗೆ ಬರುತ್ತಿದ್ದು, ಈ ಜಾಗದಲ್ಲಿ ಕೂತು ಊಟ ಮಾಡುವ ವೇಳೆ ಪ್ಲಾಸ್ಟಿಕ್ ಕಂಟೇನರ್‌ಗಳ ಬದಲಿಗೆ ಪರಿಸರ ಸ್ನೇಹಿ ಪದಾರ್ಥಗಳಲ್ಲಿ ಊಟ ಬಡಿಸಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಸಂಶೋಧಕ ಹರೋಲ್ಡ್ ಮೈಟಮ್ ತಿಳಿಸಿದ್ದಾರೆ.