ಹಾಂಕಾಂಗ್: ಪ್ರಸಿದ್ಧ ಕಂಪನಿ ಆ್ಯಪಲ್ ತನ್ನ ಮೊಬೈಲ್ ಸ್ಟೋರ್ ನಿಂದ 39 ಸಾವಿರ ಚೀನಾ ಗೇಮ್ ಆ್ಯಪ್ ಗಳನ್ನು ಗುರುವಾರ ತೆಗೆದುಹಾಕಿದೆ. ಮೊಬೈಲ್ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟು ಆ್ಯಪ್ ಗಳನ್ನು ತೆಗೆದು ಹಾಕಿದ್ದು ಇದೇ ಮೊದಲು.
ಚೈನಾ ಆಡಳಿತದಿಂದ ಅನುಮತಿ ಪಡೆಯದ 46 ಸಾವಿರ ಆ್ಯಪ್ ಗಳಿಗೆ ಆ್ಯಪಲ್ ಕಂಪನಿ ಕಳೆದ ಜೂನ್ ನಲ್ಲೇ ನೋಟಿಸ್ ನೀಡಿತ್ತು. ಆಡಳಿತದಿಂದ ಪಡೆದ ಲೈಸನ್ಸ್ ಹಾಜರುಪಡಿಸುವಂತೆ ಸೂಚಿಸಿತ್ತು. ಡೆಡ್ ಲೈನ್ ಅನ್ನು ಡಿಸೆಂಬರ್ 31 ರವರೆಗೂ ಮುಂದುವರಿಸಿತ್ತು. ಆದರೂ ದಾಖಲೆ ನೀಡದ ಆ್ಯಪ್ ಗಳನ್ನು ತೆಗೆದು ಹಾಕಿದೆ.
ಆ್ಯಪಲ್ ಯುಬಿಸಾಫ್ಟ್ ಅಸ್ತಿತ್ವಕ್ಕೆ ಗೇಮಿಂಗ್ ಆ್ಯಪ್ ಗಳು ಧಕ್ಕೆ ತರುವ ಕಾರಣ ನೀಡಿ ಈ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಈಗ ಆ್ಯಪಲ್ ಚೀನಾ ಸ್ಟೋರ್ ನಲ್ಲಿರುವ ಟಾಪ್ 1500 ಗೇಮಿಂಗ್ ಆ್ಯಪ್ ಗಳಲ್ಲಿ 74 ಮಾತ್ರ ಉಳಿದುಕೊಂಡಿವೆ ಎಂದು ಸಂಶೋಧನಾ ಸಂಸ್ಥೆ ಕ್ವಿಮಿ ಹೇಳಿದೆ.