ಮನುಕುಲದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸವೊಂದು ಘಟಿಸಿ 51 ವರ್ಷಗಳು ಕಳೆದಿವೆ.
ಜುಲೈ 20, 1969 ರಂದು ಚಂದ್ರನ ಅಂಗಳಕ್ಕೆ ಕಾಲಿಟ್ಟ ಮೊದಲ ಮಾನವ ಎಂಬ ಶ್ರೇಯಕ್ಕೆ ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಪಾತ್ರರಾಗಿ 51 ವಸಂತಗಳು ಕಳೆದಿವೆ. ನಾಸಾದ ಅಪೋಲೋ 11 ಗಗನನೌಕೆಯಲ್ಲಿ ಅವರನ್ನು ಚಂದ್ರನ ಅಂಗಳಕ್ಕೆ ಕೊಂಡೊಯ್ಯಲಾಗಿತ್ತು.
ನೀಲ್ ಆರ್ಮ್‌ಸ್ಟ್ರಾಂಗ್ ಜೊತೆಗೆ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಆಲ್ಡ್ರಿನ್ ಹಾಗೂ ಮೈಕೆಲ್ ಕಾಲಿನ್ಸ್ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಯಾತ್ರೆಯಿಂದ ಮರಳಿದ ಬಳಿಕ ಈ ಮೂವರನ್ನೂ ಕೆಲ ದಿನಗಳ ಬಳಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಚಂದ್ರನ ಅಂಗಳದಲ್ಲಿ ಅಪರಿಚಿತ ಮೈಕ್ರೋಬ್‌ಗಳಿದ್ದು, ಅವುಗಳು ಮಾನವರಿಗೆ ಹಾನಿಕಾರಕವಾಗುವ ಸಾಧ್ಯತೆ ಇರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿತ್ತು.