ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ ಕಿಟ್ ಧರಿಸಿ ಚಾರಣ ಮಾಡಿದ ಸಂಶೋಧಕರು ಬಾವಲಿ ಹಿಡಿಯಲು ಪ್ರಯತ್ನಿಸಿದ್ದಾರೆ.
ದಕ್ಷಿಣ ಚೀನಾದ ಯುನ್ನಾನ್ ನಲ್ಲಿರುವ ಹಾರ್ಸ್ ಶ್ಯೂ ಬಾವಲಿಗಳಲ್ಲಿ ಕೊರೊನಾ ವೈರಸ್ ಇದೆಯೆಂದು ಹೇಳಲಾಗುತ್ತಿದೆ. ಥೈಲ್ಯಾಂಡ್ ನಲ್ಲಿ 19 ಜಾತಿಯ ಈ ರೀತಿಯ ಬಾವಲಿಗಳಿವೆ ಆದರೆ ಈವರೆಗೂ ಕೊರೊನಾ ವೈರಸ್ ಗಾಗಿ ಅವುಗಳನ್ನು ಪರೀಕ್ಷಿಸಲಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಥಾಯ್ ನ ಸಾಯ್ ಯೋಕ್ ರಾಷ್ಟ್ರೀಯ ಉದ್ಯಾನವನದ ಕಾಂಚನಬುರಿ ಪ್ರದೇಶದಲ್ಲಿ ಚಾರಣ ಮಾಡಿದ ಸಂಶೋಧಕರು ಮೂರು ವಿಭಿನ್ನ ಗುಹೆಗಳಿಂದ ಸುಮಾರು ಇನ್ನೂರು ಬಾವಲಿಗಳನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದರು. ಈ ತಂಡವು ಬಾವಲಿಗಳಿಂದ ಲಾಲಾರಸ, ರಕ್ತ ಮತ್ತು ಮಲದ ಮಾದರಿಗಳನ್ನು ತೆಗೆದುಕೊಂಡಿದೆ. ಈ ತಂಡ 20 ವರ್ಷಗಳಿಗೂ ಹೆಚ್ಚು ಕಾಲ ಬಾವಲಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಅಧ್ಯಯನ ಮಾಡಿದೆ.