ಕೊರೊನಾ ವಿರುದ್ಧ ಈಗಾಗಲೇ ಮೂರು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದ್ದ ಪಾಕಿಸ್ತಾನ ಸರ್ಕಾರ ಇದೀಗ ಚೀನಾದ ಮತ್ತೊಂದು ಕೋವಿಡ್ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ.
ಕ್ಯಾನ್ಸಿನೋ ಬಯೋಲಾಜಿಕ್ಸ್ ಎಂಬ ಕಂಪನಿ ತಯಾರಿಸಿದ ಲಸಿಕೆಯ ಬಳಕೆಗೆ ಅನುಮೋದನೆ ನೀಡಲಾಗಿದೆ. ಇದು ಚೀನಾದ ಕಂಪನಿಯಾಗಿದ್ದು ಕೆಲವೇ ವಾರಗಳಲ್ಲಿ ಪಾಕಿಸ್ತಾನಕ್ಕೆ ಲಸಿಕೆ ವಿತರಣೆ ಮಾಡಲಾಗಿದೆ.
ಈ ಮೂಲಕ ಪಾಕಿಸ್ತಾನದಲ್ಲಿ ಕೋವಿಡ್ ವೈರಸ್ ವಿರುದ್ಧ ಅನುಮೋದನೆ ನೀಡಲಾದ ನಾಲ್ಕನೇ ಲಸಿಕೆ ಇದಾಗಿರಲಿದೆ.
ಚೀನಾದ ಕ್ಯಾಸಿನೋ ಪಾಕಿಸ್ತಾನದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಿದ ಏಕೈಕ ಕಂಪನಿಯಾಗಿತ್ತು. ಪಾಕಿಸ್ತಾನದ 18 ಸಾವಿರ ಕಾರ್ಯಕರ್ತರ ಮೇಲೆ ಕ್ಯಾಸಿನೋ ಕ್ಲಿನಿಕಲ್ ಪ್ರಯೋಗ ನಡೆಸಲಾಗಿತ್ತು.
ಕ್ಯಾಸಿನೋ ಕಂಪನಿಯ ಲಸಿಕೆ ಕೊರೊನಾ ವಿರುದ್ಧ 74.48 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದೆ. ಮೆಕ್ಸಿಕೋದಲ್ಲಿ ಕ್ಯಾಸಿನೋ ಲಸಿಕೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕೂಡ ಇದೀಗ ಈ ಲಸಿಕೆ ಬಳಕೆಗೆ ಅನುಮತಿ ನೀಡಿದೆ.