ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿರುವ ಎನಿಮೇಟೆಡ್ ಅಣಕು ವಿಡಿಯೋವೊಂದು ಟ್ವಿಟ್ಟರ್, ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋಕ್ಕೆ ಕುತೂಹಲಕಾರಿ ಪ್ರತಿಕ್ರಿಯೆಗಳು ಬಂದಿವೆ.
ಒಟ್ಟು 1ನಿಮಿಷ 22 ಸೆಕೆಂಡ್ ವಿಡಿಯೋಕ್ಕೆ “ದ ಗ್ರೇಟ್ ಕ್ಸಿಲ್ಟರ್” ಎಂದು ಕ್ಯಾಪ್ಶನ್ ನೀಡಲಾಗಿದೆ. ಸರ್ವಾಧಿಕಾರಿ ಹಿಟ್ಲರ್ ಅವರ ಕೈಸರ್ ಮೀಸೆಯಂತೆ ಮೀಸೆ ಬಿಡಿಸಿದ ಜಿನ್ ಪಿಂಗ್ ಕಪ್ಪು ಹಿನ್ನೆಲೆಯಲ್ಲಿ ನಿಂತು. “ನಾನು ಯುದ್ಧ ಬಯಸುವುದಿಲ್ಲ. ಶಾಂತಿ, ಶಾಂತಿ, ಶಾಂತಿ” ಎಂದು ಹೇಳುವ ಸನ್ನಿವೇಶದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ.
ಪಿಂಗ್ ಕಜಕಿಸ್ತಾನ ಮತ್ತು ಪಾಕಿಸ್ತಾನದ ನಕ್ಷೆಯ ಎದುರು ನಿಂತು ಹಂತ ಹಂತವಾಗಿ ಇವೆಲ್ಲ ನಮ್ಮದೇ ಆಗುತ್ತವೆ ಎಂದು ಹಾಡುತ್ತಾರೆ. ಇಷ್ಟೇ ಅಲ್ಲದೆ ಭೂತಾನ್, ಸೌತ್ ಕೊರಿಯಾ, ನೇಪಾಳ, ಕಾಂಬೋಡಿಯಾ, ಮಲೇಷ್ಯಾ, ಇಂಡೊನೇಷ್ಯ, ಜಪಾನ್, ತೈವಾನ್, ಶ್ರೀಲಂಕಾ, ತೈವಾನ್ ಮುಂತಾದ ದೇಶಗಳನ್ನು ವ್ಯಾಪಿಸಿ ಕೆಂಪು ಧ್ವಜ ಗುರುತಿಸಿ ಚಿತ್ರಿಸಲಾಗಿದೆ.
ಆದರೆ, ಲಡಾಕ್ ಮಾತ್ರ ಸ್ವಲ್ಪ ನೋವು ನೀಡುತ್ತಿದೆ ಎಂದು ಪಿಂಗ್ ಹಾಡುತ್ತಾರೆ. ಅಷ್ಟರಲ್ಲಾಗಲೇ ಭಾರತೀಯ ಸೈನಿಕರು ಬಂದು ಚೀನಿ ಸೈನಿಕರನ್ನು ಬಗ್ಗು ಬಡಿಯುವ ಎನಿಮೇಟೆಡ್ ಚಿತ್ರಣ ವಿಡಿಯೋದಲ್ಲಿದೆ.