ಪ್ರಸಕ್ತ ದಿನಗಳಲ್ಲಿ ಮಾನವೀಯತೆಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಚೀನಾದ ಕುತಂತ್ರದಿಂದಾಗಿ ಬಂದ ಕೊರೊನಾ ವೈರಸ್ ವಿಶ್ವದಲ್ಲಿ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಇನ್ನೊಂದು ಅಮೆರಿಕಾದಲ್ಲಿ ಕಪ್ಪು ವರ್ಣೀಯ ಮಿನ್ನೆಪೊಲೀಸ್ ನಿವಾಸಿ ಜಾರ್ಜ್ ಫ್ಲಾಯ್ಡ್ ಹತ್ಯೆ.
ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಅಮೆರಿಕಾದಲ್ಲಿ ದೊಡ್ಡ ಮಟ್ಟದ ಹೋರಾಟ ಪ್ರಾರಂಭವಾಗಿದೆ. “ಬ್ಲ್ಯಾಕ್ ಲೈವ್ಸ್ ಮ್ಯಾಟರ್” ಎಂಬ ಬ್ಯಾನರ್ ನಡಿ ಹಲವರು ಪ್ರತಿಭಟನೆಗಿಳಿದಿದ್ದಾರೆ. ಆದರೆ, ಈ ನಡುವೆ ಮಾನವೀಯ ಕಾರ್ಯವೊಂದು ಅಮೆರಿಕನ್ನರ ಗಮನ ಸೆಳೆದಿದೆ.
ನ್ಯೂಯಾರ್ಕ್ ನಲ್ಲಿ ಪ್ರತಿಭಟನಾ ನಿರತರಿಗೆ ವ್ಯಕ್ತಿಯೊಬ್ಬರು ಊಟದ ವ್ಯವಸ್ಥೆ ಮಾಡಿದ್ದಾರೆ. ಬ್ರೂಕ್ಲಿನ್ ಉಪನಗರದ ಲಿಯೋ ಎಂಬ ವ್ಯಕ್ತಿ ತಮ್ಮ ಸಹೋದ್ಯೋಗಿಗಳ ಜತೆ ಸೇರಿ ಸುಮಾರು 400 ಪ್ರತಿಭಟನಾಕಾರರಿಗೆ ಊಟ ಹಾಗೂ ಸಿಹಿತಿನಿಸಿನ ವ್ಯವಸ್ಥೆ ಮಾಡಿದ್ದಾರೆ. ಆತನಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ನೆಟ್ಟಿಗರು ಶ್ಲಾಘನೆ ಮಾಡಿದ್ದಾರೆ. ಹಲವು ಜನರು ಇವರಿಗೆ ಹಾರೈಸಿದ್ದಾರೆ.