
ಮೊಸಳೆಯೊಂದನ್ನು ಇಡಿಯಾಗಿ ನುಂಗಲು ನೋಡುತ್ತಿರುವ ಅನಕೊಂಡಾದ ವಿಡಿಯೋಈಗ ವೈರಲ್ ಆಗಿದೆ. ಬ್ರೆಜಿಲ್‌ನ ಮನಾಸ್ ಪ್ರಾಂತ್ಯದ ಪೊಂಟಾ ನೆಗ್ರಾ ಪ್ರದೇಶದಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.
ಮೊಸಳೆಯ ಸುತ್ತಲೂ ತನ್ನ ದೇಹವನ್ನು ನುಲಿದುಕೊಂಡಿರುವ ಅನಕೊಂಡ, ಅದನ್ನು ನುಂಗಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲಿದ್ದ ಸ್ಥಳೀಯರು ಈ ಎರಡೂ ಉರಗಗಳನ್ನು ಹಗ್ಗ ಕಟ್ಟಿ ಎಳೆದು ದೂರವಿಡಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಕೊನೆಗೂ ಸ್ಥಳೀಯರ ಹರಸಾಹಸದಿಂದ ಈ ಫೈಟ್‌ಗೊಂದು ಬ್ರೇಕ್ ಬಿದ್ದಿದೆ.