ರಷ್ಯಾದ ಅಧ್ಯಕ್ಷರ ಮುಂದೆ ಹೀಗೊಂದು ವಿಚಿತ್ರ ಬೇಡಿಕೆ ಇಡಲಾಗಿದೆ. ಗುಪ್ತವಾಗಿ ಜನರಲ್ಲಿ ಸಲಿಂಗಕಾಮಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಗಂಭೀರ ಆಪಾದನೆಗೆ ತುತ್ತಾಗಿರುವ ಐಸ್‌ಕ್ರೀಂ ಒಂದನ್ನು ಬ್ಯಾನ್ ಮಾಡಬೇಕೆಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕೋರಲಾಗಿದೆ.
ಈ ಐಸ್‌ಕ್ರೀಂ ಪೊಟ್ಟಣಗಳ ಮೇಲೆ ಕಾಮನಬಿಲ್ಲಿನ ಬಣ್ಣ ಬಳಿಯಲಾಗಿದ್ದು, ಈ ಮೂಲಕ LGBTQI+ ಆಂದೋಲನಕ್ಕೆ ಗುಪ್ತವಾಗಿ ಪ್ರೇರಣೆ ಕೊಡಲಾಗುತ್ತಿದೆ ಎಂದು ರಷ್ಯಾದ ಸಂಸದೆ ಹಾಗೂ ಅಲ್ಲಿನ ಮಹಿಳೆಯರ ಒಕ್ಕೂಟದ ಅಧ್ಯಕ್ಷೆ ಯೆಕೆಟೆರಿನಾ ಲಖೋವಾ ಆಪಾದನೆ ಮಾಡಿದ್ದಾರೆ.
ಸಲಿಂಗಕಾಮಿಗಳ ಪ್ರಪಗಾಂಡಾವನ್ನು ನಿಷೇಧಿಸಲು ಮುಂದಾಗಿರುವ ರಷ್ಯಾ ಸರ್ಕಾರ, 2013ರಲ್ಲಿ ಕಾಮನಬಿಲ್ಲಿನ ಬಣ್ಣದ ಬಾವುಟದ ಮೇಲೆ ನಿಷೇಧ ತಂದಿತ್ತು. ಇದೀಗ, ಕಾನೂನಿನ ಉಲ್ಲಂಘನೆ ಮಾಡುವ ಮೂಲಕ LGBTQI+ ಅಭಿಯಾನಕ್ಕೆ ಪ್ರೇರಣೆ ನೀಡಲು ಹೀಗೆ ಮಾಡಲಾಗಿದೆ ಎಂಬ ಬಲವಾದ ಆಪಾದನೆ ಕೇಳಿ ಬರುತ್ತಿದೆ.