ನಾವೆಲ್ ಕೊರೊನಾ ವೈರಸ್ ಭೀತಿಯಲ್ಲಿ ಜಗತ್ತು ಇನ್ನೂ ತತ್ತರಿಸುತ್ತಿರುವ ನಡುವೆಯೇ, ಜನರು ಈ ವೈರಸ್ ಲೋಕ ಬಿಟ್ಟು ತೊಲಗಲಿ ಎಂದು ದೇವತೆಗಳಿಗೆ ಮೊರೆ ಹೋಗುತ್ತಿದ್ದಾರೆ.
ಆಗ್ನೇಯ ಏಷ್ಯಾದ ಫಿಲಿಪ್ಪೀನ್ಸ್ನಲ್ಲಿ ಜನರು ಆಸಕ್ತಿಕರವಾದ ಬ್ಲೆಸ್ಸಿಂಗ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ಧಾರೆ. ತಂತಮ್ಮ ಸಾಕು ಪ್ರಾಣಿಗಳನ್ನು ಪಾದ್ರಿಯೊಬ್ಬರ ಬಳಿ ಕರೆದುಕೊಂಡು ಹೋಗಿ ಅವರಿಂದ ತೀರ್ಥ ಜಲವನ್ನು ಪ್ರೋಕ್ಷಣೆ ಮಾಡಿಸಿಕೊಂಡು ಬರುವ ಡ್ರೈವ್ ಇನ್ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು.
ಈ ಪ್ರಾಣಿಗಳೆಲ್ಲಾ ತಮ್ಮ ಮಾಲೀಕರ ತೊಡೆಗಳ ಮೇಲೆ ಕುಳಿತುಕೊಂಡು ಕ್ಯಾಥೋಲಿಕ್ ಪಾದ್ರಿಯೊಬ್ಬರಿಂದ ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡು ಸಾಗುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಪ್ರತಿ ವರ್ಷದಂದು ವಿಶ್ವ ಪ್ರಾಣಿಗಳ ದಿನಾಚರಣೆಯ ಪ್ರಯುಕ್ತ ಫಿಲಿಪ್ಪೀನ್ಸ್ನಲ್ಲಿ ಪಾದ್ರಿಗಳಿಂದ ಸಾಕು ಪ್ರಾಣಿಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿಸಲಾಗುತ್ತದೆ.