ಅಮೆರಿಕಾದ ಅತ್ಯಂತ ಹಳೆಯದಾದ ಹೋಟೆಲ್ ಆದ ಮೆಕ್ಸಿಕನ್ ಕೇವ್ ನಲ್ಲಿ ಬಹುಕಾಲದಿಂದ ಮಾನವರು ವಾಸವಿದ್ದ ಕುರುಹು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ಝಕಟೆಕಾಸ್ ನ ಬೆಟ್ಟದ ಮೇಲಿರುವ ಈ ಗುಹೆಯಲ್ಲಿ ಸಾವಿರಾರು ವರ್ಷಗಳಿಂದ ಮನುಷ್ಯರು ವಾಸವಿದ್ದ ಕುರುಹು ಪತ್ತೆಯಾಗಿದ್ದು, ಡಿಎನ್ಎ ಹುಡುಕಾಟ ನಡೆದಿದೆ.
ಇತಿಹಾಸತಜ್ಞರು, ಪುರಾತತ್ತ್ವ ತಜ್ಞರು, ಮಾನವಶಾಸ್ತ್ರಜ್ಞರು ಅಧ್ಯಯನ ಆರಂಭಿಸಿದ್ದು, ಶಿಲಾಯುಗದಲ್ಲಿ ಬಳಕೆಯಲ್ಲಿದ್ದ ಸಲಕರಣೆಗಳು ಪತ್ತೆಯಾಗಿವೆ. ಹೀಗಾಗಿ 25 ಸಾವಿರ ವರ್ಷಗಳಿಗೂ ಹಿಂದೆ ಇಲ್ಲಿ ಮನುಷ್ಯ ವಾಸವಿದ್ದಿರಬಹುದು. ಅಲ್ಲದೆ, ಕೆಲ ಕಟ್ಟಡ ತ್ಯಾಜ್ಯ ಕೂಡ ಪತ್ತೆಯಾಗಿದ್ದು, ಚಳಿಗಾಲದಲ್ಲಿ ವಾಸಿಸಲು ಈ ಗುಹೆಯನ್ನು ಆಶ್ರಯಿಸುತ್ತಿದ್ದರೇನೋ ಎಂದು ಊಹಿಸಿದ್ದಾರೆ.