ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 16, 1935ರಲ್ಲಿ ಮದುವೆಯಾದಾಗ ರಾಲ್ಫ್‌ಗೆ 17 ಹಾಗೂ ಡೊರೋತಿಗೆ 16 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಇಬ್ಬರ ವಯಸ್ಸೆಷ್ಟೆಂದು ತಿಳಿದ ನ್ಯಾಯಾಧೀಶರು ಮದುವೆಯನ್ನು ಊರ್ಜಿತ ಮಾಡಲು ನಿರಾಕರಿಸಿದ್ದರು.
ಇಬ್ಬರ ಅದೃಷ್ಟಕ್ಕೆ ಅದೇ ಸಮಯದಲ್ಲಿ ಇದ್ದ ಎರಡನೇ ನ್ಯಾಯಾಧೀಶರು ಡೊರೋತಿಯ ತಾಯಿಯ ಕೋರಿಕೆ ಮೇರೆಗೆ ಮದುವೆಗೆ ಅನುಮೋದನೆ ಕೊಟ್ಟ ಬಳಿಕ ಮದುವೆಯಾಗಿದ್ದಾರೆ.