ಅಮೆರಿಕದಲ್ಲೀಗ ಜನಾಂಗೀಯ ಹೊರಟ ತೀವ್ರಗೊಂಡಿದೆ. ಜನಾಂಗೀಯ ವಿರೋಧಿ ಪ್ರತಿಭಟನೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋ ಪಾಲ್ಗೊಂಡು, ಮಂಡಿಯೂರಿ ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿರುವುದು ಸಂಚಲನ ಸೃಷ್ಟಿಸಿದೆ.
ಬ್ಲಾಕ್ ಲೈವ್ಸ್ ಮ್ಯಾಟರ್ ಟೀಶರ್ಟ್ ಹಿಡಿದ ಟ್ರುಡೋ ಪ್ರತಿಭಟನಾಕಾರರಿಗೆ ಬೆಂಬಲವಾಗಿ ನಿಂತರು. ಸರಿ ಸುಮಾರು 8 ನಿಮಿಷ 46 ಸೆಕೆಂಡ್ ಮೌನಾಚರಣೆಯೂ ನಡೆಸಿದ್ದಾರೆ.
ಟ್ರೂಡೋ ಪ್ರತಿಭಟನೆಯ ಫೋಟೋ ವೈರಲ್ ಆಗಿದ್ದು, ಈ ಫೋಟೋ ಆಧರಿಸಿ ಅಮೆರಿಕನ್ನರು ತಮ್ಮ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಕೆನಡಾ ಪ್ರಧಾನಿ ಹಾಗೂ ಅಮೆರಿಕ ಅಧ್ಯಕ್ಷರ ನಡುವಿನ ವ್ಯತ್ಯಾಸವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇದರ ದೊಡ್ಡ ಚರ್ಚೆ ನಡೆದಿದ್ದು, ಟ್ರೂಡೊ ರಿಯಲ್ ಲೀಡರ್ ಎಂದು ಹೇಳುವ ಮೂಲಕ ಟ್ರಂಪ್ ಅವರನ್ನು ಚುಚ್ಚಿದ್ದಾರೆ.