ಟ್ಯಾಟೂಗಳು ಈ ಮನಿಲೇನಿಯಲ್ಗಳ ಪೈಕಿ ಬಲು ಕ್ರೇಜ್ ಆಗಿಬಿಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ ಮೈಮೇಲೆ ಟ್ಯಾಟೂ ಇಲ್ಲದೇ ಇರೋ ಟೀನೇಜರ್ ಇಲ್ಲವೇ ಇಲ್ಲ ಎನ್ನುವ ಮಟ್ಟದಲ್ಲಿದೆ ಟ್ಯಾಟೂ ಟ್ರೆಂಡ್.
ಈ ಕ್ರೇಜ್ ಅನ್ನೇ ಬ್ಯುಸಿನೆಸ್ ಆಗಿ ಮಾಡಿಕೊಂಡಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಗರ್ ಜಾಯಿಂಟ್ ’ಫಾರ್ಮರ್ ಬಾಯ್ಸ್’ ತನ್ನ 40ನೇ ವರ್ಷಾಚರಣೆಗೆ ವಿಶಿಷ್ಟವಾದ ಆಫರ್ ಒಂದನ್ನು ತನ್ನ ಗ್ರಾಹಕರಿಗೆ ಕೊಡಮಾಡಲು ಮುಂದಾಗಿದೆ.
ತಾಯಿಯ ಅಸಹಾಯಕತೆಗೆ ನೆರವಾದ ಅಪರಿಚಿತ: ಫೇಸ್ಬುಕ್ನಲ್ಲಿ ತಿಳಿಸಿದ ʼಧನ್ಯವಾದʼ ಪೋಸ್ಟ್ಗೆ ನೆಟ್ಟಿಗರು ಫಿದಾ
ಪಶ್ಚಿಮ ಹಾಲಿವುಡ್ನ ’ದಿ ಹಾನರಬಲ್ ಟ್ಯಾಟೂ ಶಾಪ್’ ಹಾಗೂ ಲಾಸ್ ವೆಗಾಸ್ನ ’ರಾಕಿನ್ ಟ್ಯಾಟೂ’ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವ ಈ ಬರ್ಗರ್ ಜಾಯಿಂಟ್, ತನ್ನ ಹೆಸರಿನೊಂದಿಗೆ ಹ್ಯಾಂಬರ್ಗರ್ನ ಟ್ಯಾಟೂ ಒಂದನ್ನು ಹಾಕಿಸಿಕೊಳ್ಳುವವರಿಗೆ ವರ್ಷಪೂರ್ತಿ ಉಚಿತ ಬರ್ಗರ್ಗಳನ್ನು ಕೊಡುವುದಾಗಿ ಹೇಳಿಕೊಂಡಿದೆ.