ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪಡೆಯಲು ಜನರಿಗೆ ವಿವಿಧ ಆಫರ್ ನೀಡಲಾಗ್ತಿದೆ. ಕಂಪೆನಿಗಳಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಲಸಿಕೆ ತೆಗೆದುಕೊಳ್ಳಲು ಬರುವವರಿಗೆ ಉಚಿತ ಬಿಯರ್ ನೀಡಲಾಗ್ತಿದೆ. ವಿಶೇಷವೆಂದರೆ ಮೇಯರ್ ಇದರ ಘೋಷಣೆ ಮಾಡಿದ್ದಾರೆ. ವ್ಯಾಕ್ಸಿನೇಷನ್‌ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಅಮೆರಿಕ ಸರ್ಕಾರ ಎಲ್ಲರಿಗೂ ಆದಷ್ಟು ಬೇಗ ಲಸಿಕೆ ನೀಡಲು ಮುಂದಾಗಿದೆ. ಇದೇ ಕಾರಣಕ್ಕೆ ಆಕರ್ಷಕ ಕೊಡುಗೆಗಳನ್ನು ನೀಡ್ತಿದೆ. ಗುರುವಾರ ವಾಷಿಂಗ್ಟನ್ ಡಿಸಿ ಮೇಯರ್ ಮುರಿಯಲ್ ಬೌಸರ್ ಸಾರ್ವಜನಿಕರಿಗೆ ಉಚಿತ ಬಿಯರ್ ನೀಡುವುದಾಗಿ ಘೋಷಿಸಿದ್ದಾರೆ. ಕೋವಿಡ್ ಲಸಿಕೆ ಪಡೆದ ನಂತರ 21 ವರ್ಷದ ಎಲ್ಲರಿಗೂ ಬಿಯರ್ ಉಚಿತವಾಗಿ ನೀಡಲಾಗುವುದು ಎಂದವರು ಹೇಳಿದ್ದಾರೆ. ಲಸಿಕೆಗಾಗಿ ನೋಂದಣಿ ಅಗತ್ಯವಿಲ್ಲ. ಯಾವ ಸಮಯದಲ್ಲಿ ಬಂದ್ರೂ ಅವರಿಗೆ ಲಸಿಕೆ ಹಾಕಲಾಗುತ್ತದೆ.
ಕೊರೊನಾ ಸಾಂಕ್ರಾಮಿಕದಿಂದಾಗಿ ವಾಷಿಂಗ್ಟನ್ ಡಿಸಿಯಲ್ಲಿ ಇನ್ನೂ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಕಚೇರಿಯಲ್ಲಿ ನೌಕರರ ಸಂಖ್ಯೆ ತುಂಬಾ ಕಡಿಮೆ. ರೆಸ್ಟೋರೆಂಟ್ ಇತ್ಯಾದಿಗಳಲ್ಲಿ ಜನಸಂದಣಿಯಿಲ್ಲ. ಜುಲೈ ವೇಳೆಗೆ ಎಲ್ಲವೂ ಸರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.