ಆನ್ಲೈನ್ನಲ್ಲಿ ನೀವು ಬುಕ್ ಮಾಡಿದ ವಸ್ತುಗಳು ಸರಿಯಾಗಿ ಕೈ ಸೇರಿಲ್ಲ ಅಂದರೆ ನೀವು ಗ್ರಾಹಕ ಸೇವಾ ಸಿಬ್ಬಂದಿಯನ್ನ ಸಂಪರ್ಕಿಸುತ್ತಿರಾ. ಅದೇ ರೀತಿ ಅಮೆಜಾನ್ ಗ್ರಾಹಕ ಸೇವಾ ಸಿಬ್ಬಂದಿಯನ್ನ ಮಹಿಳೆಯೊಬ್ಬರು ಸಂಪರ್ಕ ಮಾಡಿದ್ದರು. ಆದರೆ ಆ ಸಿಬ್ಬಂದಿ ನೀಡಿದ ಉತ್ತರ ಕಂಡು ಇದೀಗ ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದಾರೆ.
ಆನ್ ಲೈನ್ ಕ್ಲಾಸ್ ವೇಳೆ ಐನಾತಿ ಐಡಿಯಾ ಮಾಡಿದ ವಿದ್ಯಾರ್ಥಿ…!
ಲ್ಯುಸಿ ಹಾರಿಸನ್ ಟ್ವಿಟರ್ನಲ್ಲಿ ಈ ಸ್ಕ್ರೀನ್ಶಾಟ್ನ್ನು ಶೇರ್ ಮಾಡಿದ್ದಾರೆ.ಇದರಲ್ಲಿ ಅಬಿಗೈಲ್ ಎಂಬ ಸಿಬ್ಬಂದಿ ಲ್ಯೂರಿ ಹ್ಯಾರಿಸನ್ ಜೊತೆ ಚಾಟ್ ಮಾಡಿದ್ದಾರೆ. ಸೀದಾ ತನ್ನ ವಿಚಾರ ಮಂಡಿಸಿದ ಗ್ರಾಹಕರಾದ ಲ್ಯೂಸಿ, ಅಮೆಜಾನ್ ನನ್ನ ಪಾರ್ಸೆಲ್ನ್ನು ರಿಸೆಪ್ಶನಿಸ್ಟ್ಗೆ ನೀಡಿದೆ ಎಂದು ಹೇಳಿದ್ದಾರೆ. ನಾನು ಮನೆಯಲ್ಲಿ ಇರುವವಳು. ನನಗೆ ಯಾವುದೇ ರಿಸೆಪ್ಶನಿಸ್ಟ್ ಇಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಅಮೆಜಾನ್ ಗ್ರಾಹಕ ಸೇವಾ ಸಿಬ್ಬಂದಿ LOL (LAUGH OUT LOUD) ಎಂದು ಟೈಪ್ ಮಾಡಿದ್ದು ಈ ಫೋಟೋ ಇದೀಗ ಸಖತ್ ವೈರಲ್ ಆಗಿದೆ.