
ಅಮೆಜಾನ್ ಕೆಲ ದಿನಗಳ ಹಿಂದಷ್ಟೇ ಪೋನ್ ಅಪ್ಲಿಕೇಶನ್ ಚಿಹ್ನೆಯನ್ನ ಬದಲಾಯಿಸಿತ್ತು. ಇದರಲ್ಲಿ ಕಂದು ಬಣ್ಣದ ಬಾಕ್ಸ್ ಆಕೃತಿ ಪ್ಯಾಕೆಜಿಂಗ್ ಬಾಕ್ಸನ್ನು ಪ್ರತಿನಿಧಿಸುತ್ತಿತ್ತು. ನೀಲಿ ಬಣ್ಣದ ಪುಟ್ಟ ಸ್ಟ್ರಿಪ್ ಪ್ಯಾಕೇಜಿಂಗ್ ಟೇಪ್ನ್ನು ಪ್ರತಿನಿಧಿಸುತ್ತಿತ್ತು. ಹಾಗೂ ಎಂದಿನಂತೆ ಬಾಣದ ಗುರುತನ್ನ ಇಡಲಾಗಿತ್ತು.
ಆದರೆ ಈ ರೀತಿ ಲೋಗೋ ಬದಲಾವಣೆ ಮಾಡಿದ ಕೆಲವೇ ವಾರಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ ಎದ್ದಿದೆ. ನೀಲಿ ಬಣ್ಣದ ಸ್ಟ್ರಿಪ್ ಹಿಟ್ಲರ್ ಗಡ್ಡದಂತಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಮಾತನ್ನ ಕೇಳಿದ ಬಳಿಕ ಅಮೆಜಾನ್ ನೀಲಿ ಬಣ್ಣದ ಟೇಪ್ನ ಆಕೃತಿ ಬದಲಾಯಿಸಿದೆ.
ಕೆಲ ಸಮಯದ ಹಿಂದಷ್ಟೇ ಮಿಂತ್ರಾ ಕೂಡ ಲೋಗೋ ವಿವಾದವನ್ನ ಎದುರಿಸಿತ್ತು. ಮಿಂತ್ರಾದ ಲೋಗೋ ಮಹಿಳೆಯರಿಗೆ ಅವಮಾನ ಮಾಡುತ್ತಿದೆ ಎಂಬ ಆರೋಪದ ಬಳಿಕ ಲೋಗೋ ಬದಲಾವಣೆ ಮಾಡಲಾಗಿತ್ತು.
https://twitter.com/alexhern/status/1366396140116131842