ಟರ್ಕಿಯ ರಸಗೊಬ್ಬರ ಉತ್ಪಾದಕ ಕಂಪನಿ ಗುಬೆರ್ಟಾಸ್ ಹಾಗೂ ಆ ದೇಶದ ಕೃಷಿ ಸಹಕಾರ ಸಂಸ್ಥೆಯ ಮುಖ್ಯಸ್ಥರು ಪಾಲುದಾರಿಕೆಯಲ್ಲಿ ಭಾರೀ ಮೌಲ್ಯದ ಚಿನ್ನದ ನಿಧಿಯನ್ನು ಪತ್ತೆ ಮಾಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಅನಡೋಲು ವರದಿ ಮಾಡಿದೆ.
99 ಟನ್‌ಗಳಷ್ಟು ಇರುವ ಈ ಚಿನ್ನದ ಸಂಗ್ರಹದ ಮೌಲ್ಯವು $6 ಶತಕೋಟಿ (44 ಸಾವಿರ ಕೋಟಿ ರೂಗಳು) ಆಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಮೌಲ್ಯವು ಮಾಲ್ಡೀವ್ಸ್, ಭೂತಾನ್, ಲೈಬೀರಿಯಾ, ಬುರುಂಡಿ ಹಾಗೂ ಲೆಶೋತೋದಂಥ ಸಣ್ಣ-ಪುಟ್ಟ ದೇಶಗಳ ಜಿಡಿಪಿಗಿಂತ ದೊಡ್ಡದಾಗಿದೆ. ಟರ್ಕಿಯ ಕೇಂದ್ರ ಪಶ್ಚಿಮ ಭಾಗದಲ್ಲಿರುವ ಸೊಗುತ್ ಪ್ರದೇಶದಲ್ಲಿ ಈ ಚಿನ್ನದ ದಾಸ್ತಾನು ಪತ್ತೆಯಾಗಿದೆ.
ಈ ಸುದ್ದಿಯ ಬೆನ್ನಿಗೇ ಗುಬೆರ್ಟಾಸ್‌ನ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆ ವರದಿಯಾಗಿದೆ. ಈ ಜಾಗದಿಂದ ಇನ್ನೆರಡು ವರ್ಷಗಳಲ್ಲಿ ಚಿನ್ನವನ್ನು ಹೊರ ತೆಗೆಯಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.